ಮುಂಬೈ: ಕೇಂದ್ರದ ನೂತನ ಸಚಿವೆ ಸ್ಮೃತಿ ಇರಾನಿ ಅವರ ಕಾಳಜಿ ಬಗ್ಗೆ ಹಿರಿಯ ಗಾಯಕಿ ಆಶಾ ಭೋಂಸ್ಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ
ದಲ್ಲಿ ಗುರುವಾರ ಸಂಜೆ ಪಾಲ್ಗೊಂಡಿದ್ದ 85 ವರ್ಷದ ಆಶಾ ಭೋಂಸ್ಲೆ ಅವರಿಗೆ, ಅಲ್ಲಿನ ಜನದಟ್ಟಣೆ ನಡುವೆ ಹೊರಬರುವುದು ಕಷ್ಟವಾಗಿತ್ತು.

‘ಆ ವೇಳೆ ನನ್ನ ನೆರವಿಗೆ ಯಾರೂ ಬಂದಿರಲಿಲ್ಲ. ಇದನ್ನು ಗಮನಿಸಿದ ಸಚಿವೆ ಸ್ಮೃತಿ ಇರಾನಿ ಅವರು, ನನ್ನ ನೆರವಿಗೆ ಧಾವಿಸಿ, ಸುರಕ್ಷಿತವಾಗಿ ಮನೆಗೆ ಕಳುಹಿಸಿದ್ದಾರೆ’ ಎಂದು ಭೋಂಸ್ಲೆ ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಅವರು ಸ್ಮೃತಿ ಇರಾನಿಯೊಂದಿಗಿನ ಫೋಟೊವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಸ್ಮೃತಿ ಅವರ ಇಂಥ ಕಾಳಜಿಯೇ ಅವರನ್ನು ಗೆಲ್ಲಿಸಿದೆ’ ಎಂದು ಅವರು ಟ್ವೀಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ‘ನಮಸ್ತೆ’ಯ ಎಮೋಜಿ ಮೂಲಕ ಸ್ಮೃತಿ ಧನ್ಯವಾದ ಅರ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.