ನವದೆಹಲಿ: ಬಳಕೆಯಲ್ಲಿ ಇಲ್ಲದ ಹಳೆಯ ರೈಲು ಬೋಗಿಗಳನ್ನು ಮೊಬೈಲ್ ಗ್ರಂಥಾಲಯಗಳು ಅಥವಾ ತರಗತಿ ಕೊಠಡಿಗಳನ್ನಾಗಿ ಪರಿವರ್ತಿಸುವುದು ಒಳ್ಳೆಯದು. ಆದರೆ, ಇದುವರೆಗೆ ಸಚಿವಾಯಲಕ್ಕೆ ಇಂತಹ ಯಾವುದೇ ಪ್ರಸ್ತಾವ ಸಲ್ಲಿಕೆಯಾಗಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ಉಪಯೋಗದಲ್ಲಿ ಇಲ್ಲದ ಬೋಗಿಗಳನ್ನು ಮೊಬೈಲ್ ಗ್ರಂಥಾಲಯ ಅಥವಾ ತರಗತಿ ಕೊಠಡಿಗಳನ್ನಾಗಿ ಪರಿವರ್ತಿಸಿ ಕೊಳೆಗೇರಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಇರಿಸಲು ಸರ್ಕಾರ ಮುಂದಾಗಿದೆಯೇ ಎಂದು ರಾಜ್ಯಸಭಾ ಸಂಸದೆ ಸುಧಾಮೂರ್ತಿ ಅವರು ಪ್ರಶ್ನೆ ಕೇಳಿದ್ದರು. ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಸುಧಾಮೂರ್ತಿಯವರ ಆಸಕ್ತಿಯನ್ನು ವೈಷ್ಣವ್ ಶ್ಲಾಘಿಸಿದರು.

ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು ‘ಬೋಗಿಗಳನ್ನು ಹೀಗೆ ಪರಿವರ್ತಿಸುವುದರಿಂದ ಓದುವ ಹವ್ಯಾಸವನ್ನು ಮತ್ತು ಶಿಕ್ಷಣವನ್ನು ಉತ್ತೇಜಿಸುತ್ತದೆ. ಇಂತಹ ಕ್ರಮವನ್ನು ಅನುಷ್ಠಾನಕ್ಕೆ ತರುವುದಾದರೆ, ಬೋಗಿಗಳು ಸಾರ್ವಜನಿಕ ಬಳಕೆಗೆ ಸುರಕ್ಷಿತವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬೋಗಿಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡುವುದು ಅತ್ಯಗತ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.