ಮಸೂದೆಯು ಬಾಲ್ಯವಿವಾಹವನ್ನು ತಡೆಗಟ್ಟಲು ನೆರವಾಗಲಿದೆ. ಪುರುಷನಿಗೆ ಮದುವೆಗೆ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ಮಹಿಳೆಯರಿಗೆ 18 ವರ್ಷಗಳು ತುಂಬಿರಬೇಕೆಂಬುದನ್ನು ಕಡ್ಡಾಯಗೊಳಿಸಲಿದೆ. ಬಹುಪತ್ನಿತ್ವವನ್ನು ಇದು ಪರಿಶೀಲನೆಗೆ ಒಳಪಡಿಸಲಿದೆ. ವಿಧವೆಯರು ತಮ್ಮ ಪತಿಯ ಮರಣದ ನಂತರ ಅವರ ಉತ್ತರಾಧಿಕಾರ ಹಕ್ಕುಗಳು, ಇತರ ಸವಲತ್ತುಗಳು ಪಡೆಯಲು ಹಾಗೂ ಮದುವೆಯ ನಂತರ ಪುರುಷ ಮಹಿಳೆಯರನ್ನು ತೊರೆಯುವುದನ್ನು ತಡೆಯಲು ಇದು ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.