ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ; ಅಕ್ಟೋಬರ್‌ನಿಂದ 1 ಲೀಟರ್‌ಗಿಂತ ಕಡಿಮೆ ಇರುವ ನೀರಿನ ಬಾಟಲಿಗಳ ಬಳಕೆ ನಿಷೇಧ

Published 22 ಜುಲೈ 2023, 12:19 IST
Last Updated 22 ಜುಲೈ 2023, 12:19 IST
ಅಕ್ಷರ ಗಾತ್ರ

ಗುವಾಹಟಿ : ಅಕ್ಟೋಬರ್‌ 2ರಿಂದ ಒಂದು ಲೀಟರ್‌ಗಿಂತ ಕಡಿಮೆ ಇರುವ ಕುಡಿಯುವ ನೀರಿನ ಬಾಟಲಿಗಳ ಬಳಕೆಯನ್ನು ನಿಷೇಧಿಸಲು ಅಸ್ಸಾ ಸರ್ಕಾರ ನಿರ್ಧರಿಸಿದೆ.

2024ರ ಅಕ್ಟೋಬರ್‌ನಿಂದ 2 ಲೀಟರ್‌ಗಿಂತ ಕಡಿಮೆ ಇರುವ ನೀರಿನ ಬಾಟಲಿಗಳ ಬಳಕೆಯನ್ನೂ ನಿಷೇಧಿಸಲಾಗಿವುದು ಎಂದು ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದರು.

ಪಾಲಿಥಿನ್ ಟೆರೆಫ್ತಾಲೇಟ್ ಬಳಸಿ ತಯಾರಿಸುವ 1 ಲೀಟರ್‌ಗಿಂತ ಕಡಿಮೆ ಇರುವ ನೀರಿನ ಬಾಟಲಿಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಲ್ಲಿಸಲಾಗುವುದು, ಮೂರು ತಿಂಗಳುಗಳ ಕಾಲ ಪರಿವರ್ತನೆಗೆ ಕಾಲಾವಕಾಶ ನೀಡಲಾಗುವುದು ಎಂದರು.

ಪ್ಲಾಸ್ಟಿಕ್‌ ಬಾಟಲಿಗಳ ಉತ್ಪಾನೆಯಲ್ಲಿ ಹೆಚ್ಚು ಪಿಇಟಿ (ಪಾಲಿಥಿನ್ ಟೆರೆಫ್ತಾಲೇಟ್)ಅನ್ನು ಬಳಸಲಾಗುತ್ತದೆ. ಇದು ಮಾರಕವಾಗಿದ್ದು, ಏಕಬಳಕೆ ಪ್ಲಾಸ್ಟಿಕ್‌ ಬಳಕೆ ನಿಷೇಧವನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಜಾರಿಗೆ ತರಲು ಯೋಜಿಸಲಾಗಿದೆ ಎಂದರು.

ಇದರ ಜೊತೆಗೆ ರಾಜ್ಯದಲ್ಲಿನ ಸುಮಾರು 50 ಲಕ್ಷ ಮನೆಗಳಿಗೆ ನಾಲ್ಕು 9-ವ್ಯಾಟ್ ಎಲ್ಇಡಿ ಬಲ್ಬ್‌ಗಳನ್ನು ಉಚಿತವಾಗಿ ವಿತರಿಸಲು ರಾಜ್ಯ ಕ್ಯಾಬಿನೆಟ್ ನಿರ್ಧರಿಸಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT