ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಚುನಾವಣೆ: ಡ್ರಗ್ಸ್, ಮದ್ಯ ಸೇರಿ ₹ 690 ಕೋಟಿ ಮೊತ್ತದ ವಿವಿಧ ಸರಕು ವಶ

Published 25 ನವೆಂಬರ್ 2023, 16:13 IST
Last Updated 25 ನವೆಂಬರ್ 2023, 16:13 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದಲ್ಲಿ ಮತದಾರರಿಗೆ ಹಂಚಲು ಉದ್ದೇಶಿಸಿದ್ದ ನಗದು, ಮದ್ಯ, ಡ್ರಗ್ಸ್‌ ಸೇರಿದಂತೆ ಒಟ್ಟು ₹ 690 ಕೋಟಿ ಮೊತ್ತದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾನ ಮುಗಿದ ಬಳಿಕ ಈ ಸಂಬಂಧ ಆಯೋಗವೇ ಮಾಹಿತಿ ನೀಡಿದೆ.

2018ರ ಚುನಾವಣೆಗೆ ಹೋಲಿಸಿದರೆ ಇದು ಶೇ 970ರಷ್ಟು ಅಧಿಕ ಪ್ರಮಾಣದ್ದಾಗಿದೆ. ವಿವಿಧ ಸ್ಥಳಗಳಲ್ಲಿ ವಶಕ್ಕೆ ಪಡೆದಿರುವ ವಸ್ತುಗಳಲ್ಲಿ ನಗದು, ಮದ್ಯ, ಡ್ರಗ್ಸ್‌, ಆಭರಣಗಳು ಸೇರಿವೆ ಎಂದು ಆಯೋಗ ತಿಳಿಸಿದೆ.

ರಾಜ್ಯದಾದ್ಯಂತ cVigil ಆ್ಯಪ್‌ ಮೂಲಕ ಜನರು ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 100 ನಿಮಿಷಗಳಲ್ಲೇ ದೂರುಗಳನ್ನು ಪರಿಹರಿಸಲಾಗಿದೆ. ಶನಿವಾರ ಬೆಳಿಗ್ಗೆ ವರೆಗೆ ಸ್ವೀಕರಿಸಿದ 20,298 ದೂರುಗಳ ಪೈಕಿ 20,245 ಅನ್ನು ಪರಿಹರಿಸಿದ್ದೇವೆ. ಇನ್ನು 53 ಪ್ರಕರಣಗಳ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಡಿಸೆಂಬರ್‌ 3ಕ್ಕೆ ಫಲಿತಾಂಶ
ರಾಜಸ್ಥಾನ ವಿಧಾನಸಭೆಯು 200 ಸದಸ್ಯ ಬಲ ಹೊಂದಿದ್ದು, ಒಂದು ಸ್ಥಾನ ಹೊರತುಪಡಿಸಿ ಉಳಿದ 199 ಕ್ಷೇತ್ರಗಳಿಗೆ ಇಂದು (ನವೆಂಬರ್‌ 25ರಂದು) ಮತದಾನ ನಡೆದಿದೆ.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗುರ್ಮೀತ್ ಸಿಂಗ್ ಕೊನೂರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಶ್ರೀಗಂಗಾನಗರದ ಕರಣ್‌ಪುರ ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. ಡಿಸೆಂಬರ್‌ 3ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT