ರಾಮೇಶ್ವರ: ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇಂದು (ಭಾನುವಾರ) ಚಾಲನೆ, ಶಂಕುಸ್ಥಾಪನೆ ನೆರವೇರಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಾತೃ ಭಾಷೆಗೂ ಆದ್ಯತೆ ನೀಡುವಂತೆ ಕರೆ ನೀಡಿದ್ದಾರೆ.

ರಾಮೇಶ್ವರಂನಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಕನಿಷ್ಠ ಪಕ್ಷ ತಮಿಳಿನಲ್ಲಿ ಸಹಿ ಮಾಡಿ ಎಂದು ತಮಿಳುನಾಡಿನ ನಾಯಕರಿಗೆ ಕರೆ ನೀಡಿದ್ದಾರೆ.

ಯಾವುದೇ ನಾಯಕರನ್ನು ಉಲ್ಲೇಖಿಸದೇ ಈ ಕುರಿತು ಹೇಳಿರುವ ಪ್ರಧಾನಿ ಮೋದಿ, 'ನನಗೆ ತಮಿಳಿನಾಡಿನ ನಾಯಕರಿಂದ ಪತ್ರಗಳು ಬರುತ್ತಿವೆ. ಆದರೆ ಅಚ್ಚರಿಯ ವಿಷಯವೆಂದರೆ ಯಾರೂ ಕೂಡಾ ತಮಿಳಿನಲ್ಲಿ ಸಹಿ ಹಾಕುವುದಿಲ್ಲ. ಕನಿಷ್ಠ ಪಕ್ಷ ತಮಿಳಿನಲ್ಲಿ ಸಹಿ ಮಾಡಿ' ಎಂದು ಸಲಹೆ ಮಾಡಿದ್ದಾರೆ.

ಮಾತೃಭಾಷೆಗೆ ಆದ್ಯತೆ ನೀಡುವ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ ಮೋದಿ, 'ಜಗತ್ತಿನ ಎಲ್ಲ ಕಡೆಗಳಿಗೂ ತಮಿಳು ಭಾಷೆಯನ್ನು ತಲುಪಿಸಲು ಪ್ರಯತ್ನಗಳು ನಡೆಯುತ್ತಿವೆ' ಎಂದು ಹೇಳಿದ್ದಾರೆ.

ಬಡವರಿಗೆ ತಮಿಳು ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ ನೀಡುವಂತೆಯೂ ಅವರು ಒತ್ತಾಯಿಸಿದ್ದಾರೆ.
.ತಮಿಳುನಾಡು | ₹8,300 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ.VIDEO: ರಾಮ ನವಮಿಯಂದು ರಾಮಸೇತು ದರ್ಶನ ಪಡೆದ ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.