ನವದೆಹಲಿ: ಡ್ರೋನ್ ದಾಳಿಗೆ ಈಡಾಗಿದ್ದ ಲೈಬೀರಿಯಾದ ಹಡಗಿನಲ್ಲಿ ಇದ್ದ 13 ಮಂದಿ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಈ ಹಡಗಿನ ಮೇಲೆ ಮಾರ್ಚ್ 4ರಂದು ಏಡನ್ ಕೊಲ್ಲಿಯಲ್ಲಿ ಡ್ರೋನ್ ದಾಳಿ ನಡೆದಿತ್ತು.

ಭಾರತೀಯ ನೌಕಾಪಡೆಯು ಈ ಹಡಗಿನ ನೆರವಿಗೆ ಐಎನ್‌ಎಸ್ ಕೋಲ್ಕತ್ತ ನೌಕೆಯನ್ನು ರವಾನಿಸಿತ್ತು. ಹಡಗಿನ ಮಾಸ್ಟರ್ ಕೋರಿಕೆಯ ಅನ್ವಯ ಅದನ್ನು ದಾಳಿ ನಡೆದ ಸ್ಥಳದಿಂದ ಜಿಬೌತಿ ದೇಶದ ಜಲಪ್ರದೇಶಕ್ಕೆ ಸುರಕ್ಷಿತವಾಗಿ ಸೇರಿಸಲಾಯಿತು ಎಂದು ನೌಕಾಪಡೆ ಹೇಳಿದೆ.

ಭಾರತೀಯ ಸೇನೆಯ 12 ಮಂದಿ ಸಿಬ್ಬಂದಿ ಈ ಹಡಗನ್ನು ಮಂಗಳವಾರ ಪ್ರವೇಶಿಸಿದ್ದರು. ಅವರಲ್ಲಿ ಅಗ್ನಿಶಾಮಕ ತಜ್ಞರು ಕೂಡ ಇದ್ದರು. ಅವರು ದಾಳಿಯ ಸಂದರ್ಭದಲ್ಲಿ ಉಂಟಾಗಿದ್ದ ಬೆಂಕಿಯನ್ನು ನಂದಿಸುವಲ್ಲಿ ನೆರವಾದರು ಎಂದು ಹೇಳಿದೆ.

ಈಗ ಹಡಗು ತನ್ನ ಮುಂದಿನ ಬಂದರಿನತ್ತ ಸಾಗಿದೆ ಎಂದು ಹೇಳಿದೆ.

ಕೆಂಪು ಸಮುದ್ರ ಪ್ರದೇಶದಲ್ಲಿ ಹುಥಿ ಬಂಡುಕೋರರು ಸರಕು ಸಾಗಣೆ ಹಡಗುಗಳ ಮೇಲೆ ಈಚಿನ ದಿನಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ. ಈಚಿನ ವಾರಗಳಲ್ಲಿ ಭಾರತೀಯ ನೌಕಾಪಡೆಯು ದಾಳಿಗೆ ಗುರಿಯಾದ ಹಲವು ಹಡಗುಗಳಿಗೆ ನೆರವಿನ ಹಸ್ತ ಚಾಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.