ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲ್ಲೆ ಪ್ರಕರಣ: ಮೂವರ ಬಂಧನಕ್ಕೆ ಮುಂದಾದ ರೈಲ್ವೆ ಪೊಲೀಸರು

Published 3 ಸೆಪ್ಟೆಂಬರ್ 2024, 16:04 IST
Last Updated 3 ಸೆಪ್ಟೆಂಬರ್ 2024, 16:04 IST
ಅಕ್ಷರ ಗಾತ್ರ

ಮುಂಬೈ: ಗೋಮಾಂಸ ಸಾಗಿಸುತ್ತಿದ್ದ ಅನುಮಾನದ ಅಡಿ ಹಿರಿಯ ನಾಗರಿಕರೊಬ್ಬರ ಮೇಲೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಮೂವರನ್ನು ಮತ್ತೆ ಬಂಧಿಸಲು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಮುಂದಾಗಿದ್ದಾರೆ. ಈ ಮೂವರಿಗೆ ನೀಡಿದ್ದ ಜಾಮೀನನ್ನು ನ್ಯಾಯಾಲಯವು ರದ್ದುಪಡಿಸಿದೆ.

ಪೊಲೀಸರು ಈ ಮೂವರ ವಿರುದ್ಧ ಡಕಾಯತಿ ಹಾಗೂ ಧಾರ್ಮಿಕ ಭಾವನೆಗಳಿಗೆ ಗಾಸಿ ಉಂಟುಮಾಡಿದ ಆರೋಪವನ್ನು ಹೊರಿಸಿದ ನಂತರ ನ್ಯಾಯಾಲಯವು ಜಾಮೀನು ರದ್ದುಪಡಿಸಿದೆ.

72 ವರ್ಷ ವಯಸ್ಸಿನ ಅಶ್ರಫ್ ಅಲಿ ಸಯ್ಯದ್ ಹುಸೇನ್ ಅವರ ಮೇಲೆ ಆಗಸ್ಟ್‌ 28ರಂದು ರೈಲಿನಲ್ಲಿ ಹಲ್ಲೆ ಮಾಡಲಾಗಿತ್ತು. ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹರಿದಾಡಿತ್ತು. ಇದಾದ ನಂತರ ಪೊಲೀಸರು ಆಕಾಶ್ ಅವ್ಹದ್, ನಿತೇಶ್ ಅಹಿರೆ, ಜಯೇಶ್ ಮೋಹಿತೆ ಎನ್ನುವವರನ್ನು ಬಂಧಿಸಿದ್ದರು. ಜಾಮೀನು ರದ್ದಾದ ನಂತರ, ಅವರನ್ನು ಪತ್ತೆ ಮಾಡಿ ಬಂಧಿಸಲು ಜಿಆರ್‌ಪಿ ಅಧಿಕಾರಿಗಳು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT