ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ಮರುಪರಿಶೀಲನೆ ಕೋರಿದ್ದ ಅರ್ಜಿಗಳು ವಜಾ

Last Updated 13 ಡಿಸೆಂಬರ್ 2019, 1:49 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದ ಇತ್ಯರ್ಥಗೊಳಿಸಿ ನ.9ರಂದು ನೀಡಿದ್ದ ತೀರ್ಪು ಮರುಪರಿಶೀಲಿಸಲು ಕೋರಿ ಸಲ್ಲಿಕೆಯಾಗಿದ್ದ ಎಲ್ಲಾ 18 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿತು.

ವಿವಾದದ ಮೂಲವ್ಯಾಜ್ಯಗಳಿಗೆ ಸಂಬಂಧಿಸಿದ ಕಕ್ಷಿದಾರರು 9 ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಇವುಗಳನ್ನು ಪರಿಶೀಲಿಸಿತು.

‘ವಿಚಾರಣೆ ನಡೆಸಲು ಅರ್ಜಿಗಳು ಯಾವುದೇ ಅರ್ಹತೆ ಹೊಂದಿಲ್ಲದೆ ಇರುವುದರಿಂದ ಇವುಗಳನ್ನು ವಜಾಗೊಳಿಸಲಾಗುತ್ತಿದೆ’ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿತು.

ಇನ್ನು ಪರಿಹಾರಾತ್ಮಕ(ಕ್ಯುರೆಟಿವ್) ಅರ್ಜಿ ಸಲ್ಲಿಸುವ ಕೊನೆಯ ಆಯ್ಕೆ ಮಾತ್ರ ಕಕ್ಷಿದಾರರಿಗೆ ಇದೆ.

ವ್ಯಾಜ್ಯಗಳಿಗೆ ಸಂಬಂಧಪಡದ 40 ಮಂದಿ ಕಾರ್ಯಕರ್ತರು ಜಂಟಿಯಾಗಿ 9 ಅರ್ಜಿಗಳನ್ನು ಸಲ್ಲಿಸಿದ್ದರು. ಅವುಗಳನ್ನು ಪರಿಶೀಲಿಸಲು ಪೀಠ ನಿರಾಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT