ಅಯೋಧ್ಯೆ: ‘ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮಸೀದಿಗೆ 1857ರಲ್ಲಿ ನಡೆದ ಬ್ರಿಟೀಷರ ವಿರುದ್ಧದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರಿಡುವ ಸಾಧ್ಯತೆಯಿದೆ.

‘ಮಸೀದಿ ನಿರ್ಮಾಣದ ಮೇಲ್ವಿಚಾರಣೆಗೆ ಸುನ್ನಿ ವಕ್ಫ್ ಮಂಡಳಿ ರಚಿಸಿರುವ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಡೇಷನ್, ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರಿಡುವ ಬಗ್ಗೆ ಚಿಂತನೆ ನಡೆಸಿದೆ’ ಎಂದು ಪೌಂಡೇಷನ್‌ನ ಕಾರ್ಯದರ್ಶಿ ಅಥಾರ್ ಹುಸೈನ್ ಅವರು ತಿಳಿಸಿದರು.

ಈ ಮೊದಲು ಮಸೀದಿಗೆ ಮೊಘಲ್ ಸುಲ್ತಾನ ಬಾಬರ್ ಸೇರಿದಂತೆ ಹಲವರ ಹೆಸರು ಪರಿಗಣನೆಯಲ್ಲಿದ್ದವು. ‘ಬಾಬರಿ ಮಸೀದಿ’ಗೆ ಬಾಬರ್ ಹೆಸರಿಡಲಾಗಿತ್ತು.

'ಅಯೋಧ್ಯೆಯ ಉದ್ದೇಶಿತ ಮಸೀದಿ ಕೋಮುಸೌಹಾರ್ದ ಮತ್ತು ದೇಶಭಕ್ತಿ ಪ್ರತೀಕವಾಗಿರಬೇಕು ಎಂಬ ಕಾರಣಕ್ಕಾಗಿ ಮಸೀದಿಗೆ ಮೌಲ್ವಿ ಅಹ್ಮದುಲ್ಲಾ ಷಾ ಹೆಸರಿಡುವ ಬಗ್ಗೆ ಚಿಂತನೆ ಮಾಡಲಾಗಿದೆ. ಏಕೆಂದರೆ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಮುಸ್ಲಿಂ ಧರ್ಮದ ನಿಷ್ಠಾವಂತ ಅನುಯಾಯಿಯಾಗಿದ್ದರು’ ಎಂದು ಮೂಲಗಳು ಹೇಳಿವೆ.

‘ನಾವು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದೇವೆ. ಇದೊಂದು ಉತ್ತಮ ಸಲಹೆಯಾಗಿದೆ. ನಾವು ಇತರರೊಂದಿಗೆ ಚರ್ಚೆ ನಡೆಸಿ ಅಧಿಕೃತವಾಗಿ ಈ ಬಗ್ಗೆ ತಿಳಿಸುತ್ತೇವೆ’ ಎಂದು ಹುಸೈನ್ ಅವರು ಹೇಳಿದ್ದಾರೆ. ಜೂನ್ 5, 1858 ರಲ್ಲಿ ಮೌಲ್ವಿ ಅಹ್ಮದುಲ್ಲಾ ಷಾ ಅವರು ಹುತಾತ್ಮರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.