ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯು ಜಾತ್ಯತೀತತೆ ಚಿಂತನೆಯ ಮರಣಗಂಟೆಯಾಗಿದೆ ಎಂದು ಸಿಪಿಎಂ ಟೀಕಿಸಿದೆ.

ಈ ಕಾರ್ಯಕ್ರಮವು ರಾಜ್ಯ ಸರ್ಕಾರ, ಆಡಳಿತ ವ್ಯವಸ್ಥೆ ಹಾಗೂ ರಾಜಕಾರಣದಿಂದ ಧರ್ಮವನ್ನು ಪ್ರತ್ಯೇಕವಾಗಿಸಿ ವ್ಯಾಖ್ಯಾನಿಸುತ್ತಿದೆ ಎಂದು ಪಕ್ಷವು ಮಂಗಳವಾರ ಪ್ರತಿಕ್ರಿಯಿಸಿದೆ.

ತಿರುವನಂತಪುರದಲ್ಲಿ ನಡೆದ ಪಕ್ಷದ ಕೇಂದ್ರ ಸಮಿತಿಯ ಸಭೆ ಬಳಿಕ ನೀಡಿದ ಹೇಳಿಕೆಯಲ್ಲಿ, ‘ಧಾರ್ಮಿಕ ನಂಬಿಕೆಗಳನ್ನು ಸಿಪಿಎಂ ಗೌರವಿಸಲಿದೆ. ಅದು, ವೈಯಕ್ತಿಕ ಆಯ್ಕೆ. ಆದರೆ, ಜ. 22ರ ಕಾರ್ಯಕ್ರಮ ರಾಜಕೀಯ ಲಾಭಕ್ಕಾಗಿ ನಡೆದಿದೆ’ ಎಂದು ಹೇಳಿದೆ.

‘ಪ್ರಧಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ, ರಾಜ್ಯಪಾಲರು ಅವರು ನೇರವಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮವು ರಾಜ್ಯ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿತ್ತು’ ಎಂದು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದೆ.

‘ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಇಬ್ಬರೂ ಪ್ರಧಾನಿಯವರಿಗೆ ಅಭಿನಂದನಾ ಸಂದೇಶ ಕಳುಹಿಸಿದ್ದರು. ಸುಪ್ರೀಂ ಕೋರ್ಟ್ ಹೇಳಿರುವಂತೆ ಇಡೀ ಕಾರ್ಯಕ್ರಮ ಭಾರತ ಸರ್ಕಾರದ ಮೂಲಭೂತ ಚಿಂತನೆಯ ನೇರ ಉಲ್ಲಂಘನೆಯಾಗಿದೆ. ಸಂವಿಧಾನದ ಪ್ರಕಾರ, ರಾಜ್ಯ ಸರ್ಕಾರವು ಧರ್ಮದೊಂದಿಗೆ ಗುರುತಿಸಿಕೊಳ್ಳಬಾರದು. ಇದು, ನೇರವಾಗಿ ರಾಜಕೀಯ ಉದ್ದೇಶದ ಮತ್ತು ಚುನಾವಣಾ ಲಾಭದ ಗುರಿಯನ್ನು ಹೊಂದಿದ್ದ ಕಾರ್ಯಕ್ರಮವಾಗಿತ್ತು’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.