ಢಾಕಾ: ಬಾಂಗ್ಲಾದೇಶದಲ್ಲಿ ತೀವ್ರ ಸ್ವರೂಪದ ಗಲಭೆಗೆ ಪ್ರಚೋದನೆ ನೀಡಲು ಸಂಚು ನಡೆಸಿದ್ದ ಆರೋಪದಡಿ ಇಸ್ಲಾಮಿಸ್ಟ್ ಗುಂಪಿನ ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಮತ್ತು ಗುಪ್ತದಳ ಸಿಬ್ಬಂದಿ ಇದ್ದ ಜಂಟಿ ತಂಡವು ಢಾಕಾದ ಮೊಹಮದ್ಪುರ್ನ ಇಸ್ಲಾಮಿಕ್ ಶೈಕ್ಷಣಿಕ ಕೇಂದ್ರದ ಮೇಲೆ ದಾಳಿ ನಡೆಸಿದ್ದು, ಹೆಫಜತ್ ಎ ಇಸ್ಲಾಂ ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ಮಮುನುಲ್ ಹಕ್ ಅವರನ್ನು ಬಂಧಿಸಿತು. ಇತ್ತೀಚಿನ ಕೆಲ ವಿವಾದಗಳಿಂದ ಅವರ ಹೆಸರು ಚರ್ಚೆಯಲ್ಲಿತ್ತು.

ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆರಂಭದಲ್ಲಿ ಪ್ರತಿಭಟಿಸಿ, ಬಂಧನವನ್ನು ತಡೆಯಲು ಯತ್ನಿಸಿದರು. ಆದರೂ, ಮೊದಲ ಮಹಡಿಯಲ್ಲಿ ಇದ್ದ 47 ವರ್ಷದ ಹಕ್ ಅವರನ್ನು ಬಂಧಿಸಲಾಯಿತು ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ನ ಜಂಟಿ ಆಯುಕ್ತ ಮಹಬೂಬ್ ಅಲಂ ತಿಳಿಸಿದರು.

ಇವರ ಚಟುವಟಿಕೆ ಮೇಲೆ ಕೆಲ ದಿನಗಳಿಂದ ನಿಗಾ ಇರಿಸಲಾಗಿತ್ತು. ಬೈಟುಲ್ ಮುಕರಂ ರಾಷ್ಟ್ರೀಯ ಮಸೀದಿ ಬಳಿ ನಡೆದಿದ್ದ ಹಿಂಸೆಗೆ ಸಂಬಂಧಿಸಿ ಹಲವು ಪ್ರಕರಣಗಳನ್ನು ಇವರ ಮೇಲೆ ಹಾಕಲಾಗಿದೆ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.