ಅಹಮದಾಬಾದ್: ಅಕ್ರಮ ವಲಸಿಗರಿಗೆ ನಕಲಿ ದಾಖಲೆಗಳನ್ನು ಬಳಸಿ ಭಾರತದ ಪಾಸ್ಪೋರ್ಟ್ಗಳನ್ನು ಮಾಡಿಸಿಕೊಡುತ್ತಿದ್ದ ಆರೋಪದಲ್ಲಿ ಬಾಂಗ್ಲಾದೇಶ ನಾಗರಿಕ ಸೇರಿದಂತೆ ಇಬ್ಬರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬುಧವಾರ ಬಂಧಿಸಿದೆ.

ಬಂಧಿತ ಆರೋಪಿಗಳಾದ ಮೊಹಮ್ಮದ್ ದಿಬಾರುಲ್ ಅಲಮ್ ಹಾಗೂ ಶೋಯೆಬ್ ಖುರೇಷಿ ಅವರ ನೆರವಿನಿಂದ ಬಾಂಗ್ಲಾದೇಶದ ಒಟ್ಟು 17 ಮಂದಿ ಭಾರತದ ಪಾಸ್ಪೋರ್ಟ್ಗಳನ್ನು ಪಡೆದುಕೊಂಡಿದ್ದರು. ಪ್ರಕರಣದ ಮತ್ತೊಬ್ಬ ಆರೋಪಿ ರೊಬಿಯುಲ್ ಇಸ್ಲಾಮ್ ಎಂಬಾತ ದಕ್ಷಿಣ ಕೊರಿಯಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು 'ಎಟಿಎಸ್' ಹೇಳಿಕೆ ಬಿಡುಗಡೆ ಮಾಡಿದೆ.

ಅಲಮ್ ಅಲಿಯಾಸ್ ರಾಣಾ ಸರ್ಕಾರ್ ಎಂಬಾತ 2012ರಲ್ಲೇ ಬಾಂಗ್ಲಾದಿಂದ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ. ಆತನಿಗೆ ನೆರವಾಗಿದ್ದ ಖುರೇಷಿ ಮೂಲತಃ ರಾಜಸ್ಥಾನದವನು. ಆತ, ಆಧಾರ್, ಪ್ಯಾನ್ ಹಾಗೂ ಪಾಸ್ಪೋರ್ಟ್ ಸೇರಿದಂತೆ ಇತರ ಆನ್ಲೈನ್ ಸೇವೆಗಳನ್ನು ಒದಗಿಸುವ 'ಅಲ್ ಖುರೇಷ್ ಎಂಟರ್ಪ್ರೈಸ್' ಶಾಪ್ ಅನ್ನು ಅಹಮದಾಬಾದ್ನ ನರೋಲ್ ಪ್ರದೇಶದಲ್ಲಿ 2015ರಿಂದ ಇಟ್ಟುಕೊಂಡಿದ್ದ ಎಂದು ಉಲ್ಲೇಖಿಸಲಾಗಿದೆ.

ಬಾಂಗ್ಲಾದೇಶದ ಕಿಶೋರ್ಗಂಜ್ ಜಿಲ್ಲೆಯ ಅಲಮ್, 2015ರಲ್ಲಿ ಭಾರತಕ್ಕೆ ಬಂದಿದ್ದ. ನಕಲಿ ದಾಖಲೆಗಳನ್ನು ಬಳಸಿ 2017ರಲ್ಲಿ ಭಾರತದ ಪಾಸ್ಪೋರ್ಟ್ ಪಡೆದುಕೊಂಡಿದ್ದ. ನಂತರ, ನರೋಲಿ ಪ್ರದೇಶದಲ್ಲೇ 2018ರಲ್ಲಿ 'ವಿಐಪಿ ಮೊಬೈಲ್ ಅಂಡ್ ಮನಿ ಟ್ರಾನ್ಸ್ಫರ್' ಎಂಬ ಶಾಪ್ ತೆರೆದಿದ್ದ.

ಇಸ್ಲಾಮ್ ಮತ್ತು ಖುರೇಷಿ ಅವರ ಸಂಪರ್ಕಕ್ಕೆ ಬಂದ ನಂತರ ಅಲಮ್, ಅಕ್ರಮ ಚಟುವಟಿಕೆ ಆರಂಭಿಸಿದ್ದ. ಅಕ್ರಮ ವಲಸಿಗರಿಗೆ ಭಾರತದ ನಕಲಿ ಜನನ ಪತ್ರಗಳು, ನಕಲಿ ಮನೆ ಬಾಡಿಗೆ ಕರಾರು ಪತ್ರಗಳು, ನಕಲಿ ಆಧಾರ್ – ಪ್ಯಾನ್ ಕಾರ್ಡ್ಗಳನ್ನು ಬಳಸಿಕೊಂಡು ಪಾಸ್ಪೋರ್ಟ್ ಮಾಡಿಸಿಕೊಡಲಾರಂಭಿಸಿದ್ದ ಎಂದು ವಿವರಿಸಲಾಗಿದೆ.
.ವಕ್ಫ್ ತಿದ್ದುಪಡಿ ಕಾಯ್ದೆ: ಸುಪ್ರೀಂ ಕೋರ್ಟ್ನಲ್ಲಿ ನಾಳೆ ಅರ್ಜಿಗಳ ವಿಚಾರಣೆ.ದಿಢೀರ್ ಶ್ರೀಮಂತನಾಗುವ ಬಯಕೆ: ಬ್ಯಾಂಕಲ್ಲಿ ಚಿನ್ನ ಕದ್ದು ಸಿಕ್ಕಿಬಿದ್ದ ಅಧಿಕಾರಿ.
ಅಲಮ್ ಶಾಪ್ ಮೇಲೆ ಕೆಲವು ದಿನಗಳ ಹಿಂದೆ ದಾಳಿ ಮಾಡಿದ್ದ ಎಟಿಎಸ್ ಅಧಿಕಾರಿಗಳು, ಹಲವು ಆಧಾರ್ – ಪ್ಯಾನ್ ಕಾರ್ಡ್ಗಳು, ಚುನಾವಣಾ ಗುರುತಿನ ಚೀಟಿಗಳು, ಬಾಂಗ್ಲಾ ಸರ್ಕಾರ ವಿತರಿಸಿದ್ದ ಗುರುತಿನ ಚೀಟಿ, ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಇದೇ ರೀತಿ ಖುರೇಷಿ ಶಾಪ್ ಮೇಲೆ ದಾಳಿ ನಡೆಸಿದಾಗ, ಸುಮಾರು 300 ನಕಲಿ ಆಧಾರ್ – ಪ್ಯಾನ್ ಕಾರ್ಡ್ಗಳು, ನಕಲಿ ಜನನ ಪ್ರಮಾಣಪತ್ರಗಳನ್ನು ಪತ್ತೆಯಾಗಿದ್ದವು.

ಬಾಂಗ್ಲಾದೇಶದ 17 ಮಂದಿ ನಕಲಿ ದಾಖಲೆಗಳ ಸಹಾಯದಿಂದ ಭಾರತದ ಪಾಸ್ಪೋರ್ಟ್ಗಳನ್ನು ಪಡೆದುಕೊಂಡಿರುವುದು ಹಾಗೂ 9 ಮಂದಿಯ ಅರ್ಜಿಗಳು ಭಾರತೀಯ ಪಾಸ್ಪೋರ್ಟ್ ಪ್ರಾಧಿಕಾರದ ಬಳಿ ವಿಲೇವಾರಿ ಹಂತರದಲ್ಲಿರುವುದು ಖುರೇಷಿಯ ಕಂಪ್ಯೂಟರ್ನಲ್ಲಿ ಪತ್ತೆಯಾಗಿದೆ. ಮೂವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ಮಾಹಿತಿ ನೀಡಲಾಗಿದೆ.

2016ರಿಂದಲೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಹಾಗೂ ನಕಲಿ ದಾಖಲೆಗಳನ್ನು ಬಳಸಿ ಇಲ್ಲಿನ ಪಾಸ್ಪೋರ್ಟ್ ಮಾಡಿಸಿಕೊಂಡಿದ್ದ ಬಾಂಗ್ಲಾ ಮಹಿಳೆಯೊಬ್ಬರನ್ನು ನಗರದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ, ಈ ಪ್ರಕರಣ ವರದಿಯಾಗಿದೆ.

ಆಕೆ, ಅದೇ ಪಾಸ್ಪೋರ್ಟ್ ಬಳಸಿಕೊಂಡು ದಕ್ಷಿಣ ಆಪ್ರಿಕಾ, ಯುಎಇಗೆ ಭೇಟಿ ನೀಡಿದ್ದರು. ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಬಾಂಗ್ಲಾದೇಶಕ್ಕೂ ಹಲವು ಬಾರಿ ಹೋಗಿ ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.