ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನದಲ್ಲಿ ಭಾರಿ ಮಳೆ: ಬನ್ಸ್ವಾರಾ-ಉದಯಪುರ ಹೆದ್ದಾರಿ ಬಂದ್‌

Published 26 ಆಗಸ್ಟ್ 2024, 10:40 IST
Last Updated 26 ಆಗಸ್ಟ್ 2024, 10:40 IST
ಅಕ್ಷರ ಗಾತ್ರ

ಜೈಪುರ: ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದಲ್ಲಿ 20 ಸೆಂ.ಮೀಗಿಂತ ಹೆಚ್ಚು ಮಳೆಯಾಗಿದೆ. ಬನ್ಸ್ವಾರಾ-ಉದಯಪುರ ಹೆದ್ದಾರಿಯಲ್ಲಿ ನೀರು ನಿಂತಿರುವುದರಿಂದ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಾಜ್‌ಸಮಂದ್, ಚಿತ್ತೋರ್‌ಗಢ, ಅಜ್ಮೀರ್, ಭಿಲ್ವಾರಾ ಮತ್ತು ಪಾಲಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

24 ಗಂಟೆಗಳ ಅವಧಿಯಲ್ಲಿ ಬನ್ಸ್ವಾರಾ ಮತ್ತು ಡುಂಗರ್‌ಪುರದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಪ್ರತಾಪಗಢದ ಪೀಪಲ್‌ಖೂಟ್‌ನಲ್ಲಿ ಅತಿ ಹೆಚ್ಚು (26.ಸೆಂ.ಮೀ) ಮಳೆ ದಾಖಲಾಗಿದೆ.

ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಬನ್ಸ್ವಾರಾದಲ್ಲಿ 19.5 ಸೆಂ.ಮೀ ಮತ್ತು ಡೂಂಗರ್‌ಗಢದ ಚಿಖಾಲಿಯಲ್ಲಿ 13.2 ಸೆಂ. ‌ಮೀ ಮಳೆಯಾಗಿದೆ. ಸಲೋಪತ್, ಬಗಿದೌರಾ, ಭುಂಗ್ರಾ, ಅರ್ಥುನಾ ಮತ್ತು ಬನ್ಸ್ವಾರದ ಕೇಸರಪುರದಲ್ಲಿ 12.7 ಸೆಂ. ‌ಮೀ – 19.5 ಸೆಂ. ‌ಮೀ ಮಳೆಯಾಗಿದೆ ಎಂದು ಜೈಪುರ ಹವಾಮಾನ ಕೇಂದ್ರ ತಿಳಿಸಿದೆ.

ಮಂಗಳವಾರ ಮತ್ತು ಬುಧವಾರದಂದು ರಾಜ್ಯದ ದಕ್ಷಿಣ ಮತ್ತು ಪೂರ್ವ ಭಾಗಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT