ಕೋಲ್ಕತ್ತಾ: ರಾಷ್ಟ್ರಗೀತೆಯಂತೆಯೇ ನಾಡಗೀತೆ ಹಾಡಿದಾಗಲೂ ಎದ್ದು ನಿಂತು ಗೌರವ ಕೊಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ಲಾಟಿನಂ ಜುಬಿಲಿ ಸ್ಮಾರಕ ಕಟ್ಟಡದ ನೆಲಮಾಳಿಗೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿ ಮಾತನಾಡಿದ ಮಮತಾ, ‘ಇಂದಿನಿಂದ ಪ್ರಾರಂಭವಾಗಲಿರುವ ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಹಿಡಿದು ರಾಜ್ಯ ಸರ್ಕಾರ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ನಾಡಗೀತೆ ಹಾಡಿಸಲಾಗುತ್ತದೆ’ ಎಂದು ಹೇಳಿದರು.

‘ರಾಷ್ಟ್ರಗೀತೆಯಂತೆಯೇ ನಾಡಗೀತೆಯನ್ನು ಹಾಡಿದಾಗಲೆಲ್ಲ ಎದ್ದು ನಿಂತು ಗೌರವ ಕೊಡಬೇಕು ಎಂದು ಮನವಿ ಮಾಡುತ್ತೇನೆ. ಚಲನಚಿತ್ರೋತ್ಸವದ ಉದ್ಘಾಟನ ಸಮಾರಂಭದಲ್ಲೂ ನಾಡಗೀತೆಯನ್ನು ಪ್ರಸಾರ ಮಾಡಲಾಗುತ್ತದೆ’ ಎಂದರು.

ಪಶ್ಚಿಮ ಬಂಗಾಳದ ವಿಧಾನಸಭೆಯು ‘ಪೋಲಿಯಾ ಬೈಸಾಖ್’ ದಿನವನ್ನು ರಾಜ್ಯ ದಿನವಾಗಿ ಆಚರಿಸಲು ಮತ್ತು ಟಾಗೋರ್ ರಚನೆಯ 'ಬಾಂಗ್ಲಾರ್ ಮತಿ, ಬಾಂಗ್ಲಾರ್ ಜೋಲ್' (ಬಂಗಾಳದ ಮಣ್ಣು, ಬಂಗಾಳದ ನೀರು) ಅನ್ನು ನಾಡಗೀತೆಯಾಗಿ ಪರಿಗಣಿಸುವ ನಿರ್ಣಯವನ್ನು ಸೆಪ್ಟೆಂಬರ್ನಲ್ಲಿ ಅಂಗೀಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.