ಕೋಲ್ಕತ್ತ: ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ಪಶ್ಚಿಮ ಬಂಗಾಳದ ಸಚಿವ ಚಂದ್ರನಾಥ್ ಸಿನ್ಹಾ ಅವರು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಮುಂದೆ ಬುಧವಾರ ಹಾಜರಾಗಿದ್ದರು.
‘ಕೆಲ ದಿನಗಳ ಹಿಂದೆ ಸಿನ್ಹಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ ಸಿಜಿಒ ಕಟ್ಟಡಲ್ಲಿರುವ ಇ.ಡಿ ಕಚೇರಿಯಲ್ಲಿ ಸಿನ್ಹಾ ಅವರು ವಿಚಾರಣೆಗೊಳಗಾದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ, ಬೀರಭೂಮ್ ಜಿಲ್ಲೆಯ ಬೋಲ್‌ಪುರದಲ್ಲಿರುವ ಸಿನ್ಹಾ ಅವರ ನಿವಾಸದಲ್ಲಿ ಇ.ಡಿ ಮಾರ್ಚ್‌ನಲ್ಲಿ ಶೋಧ ನಡೆಸಿತ್ತು. ಈ ವೇಳೆ ಮೊಬೈಲ್ ಫೋನ್ ಮತ್ತು 40 ಲಕ್ಷ ನಗದು ವಶಪಡಿಸಿಕೊಂಡಿತ್ತು.