ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಇದುವರೆಗೆ, ಒಂದಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ಹೆಸರು ನೋಂದಣಿ ಮಾಡಿಕೊಂಡಿರುವ 5.76 ಲಕ್ಷ ಮತದಾರರನ್ನು ಗುರುತಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

‘ಎಸ್ಐಆರ್’ ಆಧರಿಸಿ, ಇದುವರೆಗಿನ ಅಂಕಿ ಅಂಶದಂತೆ ಪಟ್ಟಿಯಲ್ಲಿ ಇದ್ದ ಮತದಾರರಲ್ಲಿ 12.55 ಲಕ್ಷ ಜನರು ಮೃತಪಟ್ಟಿರಬಹುದು. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ–ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುಮಾರು 35.69 ಲಕ್ಷ ಮಂದಿ ಅವರ ವಿಳಾಸದಲ್ಲಿ ಸಿಕ್ಕಿಲ್ಲ. 17.37 ಲಕ್ಷ ಮತದಾರರು ಬೇರೆಡೆಗೆ ಶಾಶ್ವತವಾಗಿ ಸ್ಥಳಾಂತರಗೊಂಡಿರಬಹುದು ಎಂದು ಆಯೋಗ ಅಂದಾಜಿಸಿದೆ.

‘ಎಸ್ಐಆರ್’ ಮುಂದುವರಿದಿರುವುದರಿಂದ ಈ ಅಂಕಿ ಅಂಶ ಬದಲಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಯೋಗವು ಆಗಸ್ಟ್ 1ರಂದು ಬಿಹಾರದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಿದೆ. ಬಿಹಾರದ ಒಟ್ಟು 7.89 ಕೋಟಿ ಮತದಾರರಲ್ಲಿ, 6.60 ಕೋಟಿ ಮತದಾರರನ್ನು (ಶೇ 83.66) ಈಗಾಗಲೇ ಕರಡು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಇತ್ತೀಚೆಗೆ ಹೇಳಿತ್ತು.

ರಾಜ್ಯದಿಂದ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ಮತದಾರರಿಗೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ನಿಗದಿತ ನಮೂನೆ ಭರ್ತಿ ಮಾಡಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇವರ ಹೆಸರನ್ನೂ, ಗಡುವಿನೊಳಗೆ ಕರಡು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.