ನವದೆಹಲಿ: ಅಪೋಲೊ ಟೈರ್ಸ್ ಕಂಪನಿಯು ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಭಾರತ ಕ್ರಿಕೆಟ್ ತಂಡದ ಪ್ರಧಾನ ಪ್ರಾಯೋಜಕತ್ವ ವಹಿಸಿಕೊಂಡಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ಪ್ರಕಟಿಸಿದೆ.

ಈ ಹಿಂದೆ ಆನ್ಲೈನ್ ಗೇಮಿಂಗ್ ವೇದಿಕೆಯಾದ ಡ್ರೀಮ್ ಇಲೆವೆನ್ ಪ್ರಧಾನ ಪ್ರಾಯೋಜಕತ್ವ ವಹಿಸಿತ್ತು. ಕೇಂದ್ರ ಸರ್ಕಾರ ಹೊಸ ಕಾನೂನಿನಡಿ ಆನ್ಲೈನ್ ಗೇಮಿಂಗ್ (ಆನ್ಲೈನ್ನಲ್ಲಿ ಹಣಪಣಕ್ಕಿಟ್ಟು ಆಟದಲ್ಲಿ ತೊಡಗಿಸುವ ವೇದಿಕೆ) ಪ್ಲಾಟ್ಫಾರ್ಮ್ಗಳಿಗೆ ನಿಷೇಧ ಹೇರಿತ್ತು. ಹೀಗಾಗಿ ಬಿಸಿಸಿಐ ಹೊಸ ಪ್ರಾಯೋಜಕರ ಅನ್ವೇಷಣೆಯಲ್ಲಿತ್ತು.

ಭಾರತ ತಂಡ, ದುಬೈನಲ್ಲಿ ಹಾಲಿ ನಡೆಯುತ್ತಿರುವ ಏಷ್ಯಾ ಕಪ್ನಲ್ಲಿ ಪ್ರಧಾನ ಪ್ರಾಯೋಜಕರಿಲ್ಲದೇ ಆಟವಾಡುತ್ತಿದೆ.

ಜಾಗತಿಕ ಮಟ್ಟದ ಟೈರ್ ದಿಗ್ಗಜ ಕಂಪನಿಯಾದ ಅಪೋಲೊ ಇದೇ ಮೊದಲ ಬಾರಿ ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ₹579 ಕೋಟಿಗೆ ಒಪ್ಪಂದ ಮಾಡಿಕೊಂಡಿದೆ. 2028ರ ಮಾರ್ಚ್ವರೆಗೆ ಅಪೋಲೊ ಜೊತೆ ಒಪ್ಪಂದ ಇರಲಿದೆ. ಡ್ರೀಮ್ ಇಲೆವೆನ್ ₹358 ಕೋಟಿಗೆ ಒಪ್ಪಂದ ಮಾಡಿಕೊಂಡಿತ್ತು.

ಈ ಅವಧಿಯಲ್ಲಿ ಭಾರತ 121 ದ್ವಿಪಕ್ಷೀಯ ಸರಣಿಯ ಪಂದ್ಯಗಳನ್ನು ಆಡಲಿದೆ. ಐಸಿಸಿ ಟೂರ್ನಿಯ 21 ಪಂದ್ಯಗಳನ್ನೂ ಆಡಲಿದೆ.

ಭಾರತ ಪುರುಷರ ಮತ್ತು ಮಹಿಳಾ ತಂಡದ ಪೋಷಾಕಿನಲ್ಲಿ ಇನ್ನು ಮುಂದೆ ಅಪೊಲೊ ಟೈರ್ಸ್ ಲೋಗೊ ಕಾಣಿಸಿಕೊಳ್ಳಲಿದೆ.

ಬಹುರಾಷ್ಟ್ರೀಯ ಕಂಪನಿಯಾದ ಅಪೊಲೊ ಟೈರ್ಸ್ ಗುರುಗ್ರಾಮದಲ್ಲಿ ಕೇಂದ್ರಕಚೇರಿ ಹೊಂದಿದೆ. ಭಾರತ ಮತ್ತು ಯುರೋಪ್ ಸೇರಿದಂತೆ ಹೊರದೇಶಗಳಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಹೊಂದಿದೆ.
.ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವದ ಬೆಲೆ ಹೆಚ್ಚಿಸಿದ ಬಿಸಿಸಿಐ.ಹಿಂದೆ ಸರಿದ ಡ್ರೀಮ್ 11: ಹೊಸ ಪ್ರಾಯೋಜಕರಿಗೆ ಬಿಸಿಸಿಐ ಹುಡುಕಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.