ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವವು ದುಬಾರಿಯಾಗಲಿದೆ. ತಂಡದ ಜೆರ್ಸಿ ಪ್ರಾಯೋಜಕತ್ವದ ದರವನ್ನು ಬಿಸಿಸಿಐ ಏರಿಸಿದೆ. ಬಿಸಿಸಿಐ ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ ₹3.5 ಕೋಟಿ ಮತ್ತು ಬಹುತಂಡಗಳ ಸರಣಿಯ ಒಂದು ಪಂದ್ಯಕ್ಕೆ ₹1.5 ಕೋಟಿಗೆ ಹೆಚ್ಚಿಸಿದೆ.

ಕ್ರಿಕ್ಬಜ್ನಲ್ಲಿನ ವರದಿಯ ಪ್ರಕಾರ, ಈ ಪರಿಷ್ಕೃತ ದರಗಳು ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಆಯೋಜಿಸುವ ಟೂರ್ನಿಗಳಲ್ಲಿಯೂ ಅನ್ವಯವಾಗುತ್ತವೆ.

ಉದ್ಯಮದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಕ್ರಿಕ್ಬಜ್, ಪ್ರಸ್ತುತ ದ್ವಿಪಕ್ಷೀಯ ಪಂದ್ಯಗಳಿಗೆ ₹3.17 ಕೋಟಿ ಮತ್ತು ಬಹುತಂಡಗಳ ಸರಣಿಯ ಪ್ರತಿ ಪಂದ್ಯಕ್ಕೆ ₹1.12 ಕೋಟಿ ಪ್ರಾಯೋಜಕತ್ವ ದರವಿದೆ.

ಸರ್ಕಾರವು ಆನ್ಲೈನ್ ಗೇಮಿಂಗ್ ಕಾಯ್ದೆ, 2025 ಅನ್ನು ಅನುಮೋದಿಸಿದ ಬಳಿಕ ಡ್ರೀಮ್ 11 ಪ್ರಾಯೋಜಕತ್ವದಿಂದ ಹೊರಬಂದ ನಂತರ ಈ ಬೆಳವಣಿಗೆ ನಡೆದಿದೆ.

ಏಷ್ಯಾ ಕಪ್ ಬಳಿಕವೇ ಬಿಸಿಸಿಐನ ಈ ಪರಿಷ್ಕೃತ ಜೆರ್ಸಿ ಪ್ರಾಯೋಜಕತ್ವದ ದರಗಳು ಜಾರಿಗೆ ಬರಲಿವೆ. ಇದರಿಂದ ಬಿಸಿಸಿಐ ಸುಮಾರು ₹400 ಕೋಟಿ ಆದಾಯ ನಿರೀಕ್ಷಿಸಿದ್ದು, ಬಿಡ್ಡಿಂಗ್ ಬಳಿಕ ಹೆಚ್ಚೂ ಆಗಬಹುದು.

ಡ್ರೀಮ್–11 ಹೊರಹೋದ ಬಳಿಕ ಭಾರತ ತಂಡದ ಟೈಟಲ್ ಪ್ರಾಯೋಜಕತ್ವಕ್ಕೆ ಬಿಸಿಸಿಐ ಬಿಡ್ಡಿಂಗ್ಗೆ ಆಹ್ವಾನಿಸಿದೆ.

ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಸರಣಿಗೆ ಟೈಟಲ್ ಪ್ರಾಯೋಜಕತ್ವ ಇಲ್ಲದೆ ಭಾರತ ತಂಡ ಕಣಕ್ಕಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.