ಪಟ್ನಾ: ಮತಗಟ್ಟೆ ಸಮೀಕ್ಷೆಗಳು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎಗೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಇದರ ಬೆನ್ನಲ್ಲೆ ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿ 501 ಕೆ.ಜಿ ಲಡ್ಡು ಆರ್ಡರ್ ಮಾಡಿದೆ.

ನ.06 ಮತ್ತು ನ.11 ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನ.14 ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ಈ ಬಾರಿ ಬಿಹಾರದಲ್ಲಿ ದಾಖಲೆಯ ಶೇ 66.91ರಷ್ಟು ಮತದಾನವಾಗಿದೆ.

ಮತಗಟ್ಟೆಗಳು ಎನ್ಡಿಎಗೆ ಬಹುಮತ ಎಂದು ಹೇಳಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ತಯಾರಿ ನಡೆಸಿದ್ದಾರೆ. ಈ ಕುರಿತು ಬಿಜೆಪಿ ಕಾರ್ಯಕರ್ತ ಕೃಷ್ಣ ಕುಮಾರ್ ಎನ್ನುವವರು ಪಿಟಿಐ ಜತೆ ಮಾತನಾಡಿ, ‘ಮತ ಎಣಿಕೆ ದಿನ ಬಿಜೆಪಿ ಹೋಳಿ, ದಸರಾ, ದೀಪಾವಳಿ, ಈದ್ ಎಲ್ಲವನ್ನೂ ಆಚರಿಸಲಿದೆ. ಏಕೆಂದರೆ ಜನರು ಎನ್ಡಿಎ ಪರವಾಗಿ ಮತ ಹಾಕಿದ್ದಾರೆ. ಲಡ್ಡುಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುವುದು’ ಎಂದರು.

ಪಟ್ನಾದಲ್ಲಿರುವ ಲಡ್ಡು ತಯಾರಕರು ಬಿಜೆಪಿ ಕಾರ್ಯಕರ್ತರು 501 ಕೆ.ಜಿ ಲಡ್ಡು ತಯಾರಿಸಲು ಹೇಳಿದ್ದಾರೆ. ನ.14ರಂದು ಅದನ್ನು ತಲುಪಿಸಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.