ನವದೆಹಲಿ: ಚುನಾವಣೆ ಸಮೀಕ್ಷೆಗಳ ಮೇಲೆ ನಿರ್ಬಂಧವಿರುವಾಗ ಮಾಧ್ಯಮಗಳಲ್ಲಿ ಜ್ಯೋತಿಷಿಗಳು, ಟ್ಯಾರೋ ರೀಡರ್ಗಳು, ವಿಶ್ಲೇಷಕರ ಮೂಲಕ ಸೋಲು ಗೆಲುವಿನ ಮುನ್ಸೂಚನೆಯನ್ನು ಪ್ರಸಾರ ಮಾಡುವುದೂ ನಿಯಮಬಾಹಿರ ಎಂದು ಚುನಾವಣಾ ಆಯೋಗ ಗುರುವಾರ ಸ್ಪಷ್ಟಪಡಿಸಿದೆ.

ಬಿಹಾರ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಇದೇ 28ರಿಂದ ಆರಂಭವಾಗಲಿದೆ. ಅದಕ್ಕೂ ಮೊದಲು ಗುರುವಾರ ಚುನಾವಣೆ ಆಯೋಗ ಸಲಹೆ ಸೂಚನೆಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡಿದೆ. ಎಲೆಕ್ಟ್ರಾನಿಕ್ ಮತ್ತು ಮುದ್ರಣಗಳು ಮುಕ್ತ, ನ್ಯಾಯಸಮ್ಮತ ಚುನಾವಣೆಗಾಗಿ ಇಂಥ ಕಾರ್ಯಕ್ರಮನ್ನು ಪ್ರಸಾರ ಮಾಡುವುದನ್ನು ತಡೆಯಬೇಕು,’ ಎಂದು ಆಯೋಗ ತಿಳಿಸಿದೆ.

2017ರ ಮಾರ್ಚ್ 30ರಂದು ಮೊದಲ ಬಾರಿಗೆ ಸಮೀಕ್ಷೆಗಳ ಕುರಿತು ಸಲಹೆ ಸೂಚನೆಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಜನ ಪ್ರಾತಿನಿಧಿ ಕಾಯ್ದೆಯ ಸೆಕ್ಷನ್ 126ಎ ಅನ್ನು ಉಲ್ಲೇಖಿಸಿ ಸಲಹೆ ಸೂಚನೆಗಳನ್ನು ನೀಡಿತ್ತು.

‘ಯಾವುದೇ ವ್ಯಕ್ತಿ ಯಾವುದೇ ಮಾದರಿಯಲ್ಲಿ ಮತಗಟ್ಟೆ ಸಮೀಕ್ಷೆ ನಡೆಸಬಾರದು. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅದನ್ನು ಪ್ರಕಟಿಸಲು ಅಥವಾ ಪ್ರಚಾರ ಮಾಡಲು ಪ್ರಯತ್ನಿಸಬಾರದು,’ ಎಂದು ನಿಬಂಧನೆಯಲ್ಲಿ ಹೇಳಲಾಗಿದೆ.

2020ರ ಅಕ್ಟೋಬರ್ 28 ರಂದು (ಬುಧವಾರ) ಬೆಳಿಗ್ಗೆ 7 ಮತ್ತು ನವೆಂಬರ್ 7 ರಂದು ಸಂಜೆ 6.30ರ ನಡುವಿನ ನಿಷೇಧಿತ ಅವಧಿಯಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಅಥವಾ ಲೇಖನವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ (ಎಲೆಕ್ಟ್ರಾನಿಕ್–ಮುದ್ರಣ ) ಚುನಾವಣಾ ಆಯೋಗ ಸೂಚಿಸಲಾಗಿದೆ

ಬಿಹಾರ ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದೆ. ಅ. 28ರಂದು ಮೊದಲ ಹಂತ, ನ.3 ರಂದು ಎರಡನೇ ಹಂತ, ನ.7ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ನ. 10ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.