ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿಗೆ ತಡೆ: ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Published 12 ಮೇ 2023, 8:01 IST
Last Updated 12 ಮೇ 2023, 8:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜ್ಯದಲ್ಲಿ ಕೈಗೊಂಡಿದ್ದ ಜಾತಿ ಗಣತಿಗೆ ತಡೆ ನೀಡಿ ಪಟ್ನಾ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

‘ಜಾತಿ ಗಣತಿಯನ್ನು ತಡೆದರೆ ಭಾರಿ ನಷ್ಟವಾಗಲಿದೆ. ಜಾತಿ ಆಧಾರಿತ ದತ್ತಾಂಶ ಸಂಗ್ರಹಿಸುವುದು ಸಂವಿಧಾನದ 15 ಮತ್ತು 16ನೇ ವಿಧಿ ನೀಡಿರುವ ಅಧಿಕಾರ’ ಎಂದು ಮೇ 4ರಂದು ಸಲ್ಲಿಸಿರುವ ಮೇಲ್ಮನವಿಯಲ್ಲಿ ಬಿಹಾರ ಸರ್ಕಾರ ಹೇಳಿದೆ.

ಜಾತಿ ಗಣತಿಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಮುಂದಿನ ವಿಚಾರಣೆಯನ್ನು ಪಟ್ನಾ ಹೈಕೋರ್ಟ್‌ ಜುಲೈ 3ರಂದು ನಡೆಸಲಿದೆ.

ಮೊದಲ ಸುತ್ತಿನ ಜಾತಿ ಗಣತಿಯನ್ನು ಜನವರಿ 7ರಿಂದ 21ರ ವರೆಗೆ ನಡೆಸಲಾಗಿದೆ. ಎರಡನೇ ಸುತ್ತಿನ ಗಣತಿ ಏಪ್ರಿಲ್‌ 15ರಂದು ಆರಂಭಗೊಂಡಿದ್ದು, ಮೇ 15ರಂದು ಮುಗಿಯಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT