ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮನಿಗಾಗಿ ಹುಡುಕಾಟ; ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಅಣ್ಣನ ಬಂಧನ

Published 8 ಜನವರಿ 2024, 11:43 IST
Last Updated 8 ಜನವರಿ 2024, 11:49 IST
ಅಕ್ಷರ ಗಾತ್ರ

ದರ್ಭಾಂಗ್ (ಬಿಹಾರ): ತಮ್ಮನಿಗಾಗಿ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬ, ಪೊಲೀಸ್ ಠಾಣೆಯೊಳಗೆ ನುಗ್ಗಿ ಬೆಂಕಿ ಹಚ್ಚಿದ ಪ್ರಕರಣ ಬಿಹಾರದ ದರ್ಭಾಂಗ್‌ನಲ್ಲಿ ನಡೆದಿದೆ.

ಬೆಂಕಿ ಹಚ್ಚಿದ ಧರ್ಮೇಂದ್ರ ಠಾಕೂರ್ ಎಂಬುವವರನ್ನು ಬಂಧಿಸಲಾಗಿದೆ.

ಅಣ್ಣ–ತಮ್ಮನ ಜಗಳದ ನಂತರ ತಮ್ಮ ಕಣ್ಮರೆಯಾಗಿದ್ದ. ಇದನ್ನು ವಿಚಾರಿಸಲು ಧರ್ಮೇಂದ್ರ ಮತ್ತೊಬ್ಬ ವ್ಯಕ್ತಿಯೊಂದಿಗೆ ಮೊರೊ ಪೊಲೀಸ್‌ ಠಾಣೆಗೆ ಸೋಮವಾರ ಭೇಟಿ ನೀಡಿ ವಿಚಾರಿಸಿದ್ದರು.

ಆದರೆ ಕೆಲವೇ ನಿಮಿಷಗಳಲ್ಲಿ ಅಲ್ಲಿಯೇ ಇಡಲಾಗಿದ್ದ ದಹಿಸುವ ವಸ್ತುವಿಗೆ ಬೆಂಕಿಯನ್ನು ಈ ಇಬ್ಬರು ಹಚ್ಚಿದ್ದಾರೆ. ಕ್ಷಣಮಾತ್ರದಲ್ಲಿ ಹರಡಿದ ಬೆಂಕಿಯ ಕೆನ್ನಾಲಿಗೆಯು ಪೊಲೀಸರು ಮಲಗಿದ್ದ ಬ್ಯಾರಾಕ್‌ಗೆ ತಗುಲಿರುವುದು ಸಿಸಿಟಿವಿಯಲ್ಲಿ ದಾಖಲಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬೆಂಕಿಯನ್ನು ನಂದಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಪೊಲೀಸರು ಬೆಂಕಿ ಆರಿಸುತ್ತಿದ್ದಾಗಲೇ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು. ಕೆಲ ಗಂಟೆಗಳ ನಂತರ ಠಾಕೂರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ಸಹಚರ ಅರುಣ್ ಯಾದವ್‌ ಎಂಬಾತನಿಗಾಗಿ ಬಲೆ ಬೀಸಿದ್ದಾರೆ.

ಘಟನೆ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆರೋಪಿಗಳು ಠಾಣೆಗೆ ಏಕೆ ಬೆಂಕಿ ಹಚ್ಚಿದರು ಎಂಬ ಪ್ರಶ್ನೆಗೆ ಉತ್ತರಿಸಲು ಪೊಲೀಸರು ನಿರಾಕರಿಸಿದ್ಧಾರೆ. ಠಾಣೆಗೆ ಬಂದ ವ್ಯಕ್ತಿಯೊಂದಿಗೆ ವ್ಯವಹರಿಸುವಲ್ಲಿ ಪೊಲೀಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆಯೇ ಎಂಬುದರ ಕುರಿತೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT