ಬಿಹಾರ: ಬಿಹಾರದ ಜೊಕೀಹಾಟ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ, ಮಾಜಿ ಸಂಸದ ಸರ್ಫರಾಜ್ ಆಲಂ ಅವರು ರಾಷ್ಟ್ರೀಯ ಜನತಾ ದಳಕ್ಕೆ (ಆರ್ಜೆಡಿ) ರಾಜೀನಾಮೆ ನೀಡಿ ಜನ ಸುರಾಜ್ ಪಾರ್ಟಿಗೆ ಸೇರಿದ್ದಾರೆ. ಆಲಂ ಅವರು ರಾಜ್ಯದ ಸೀಮಾಂಚಲ್ ಪ್ರದೇಶದ ಆರ್ಜೆಡಿ ನಾಯಕರಾಗಿದ್ದ ದಿವಂಗತ ತಸ್ಲೀಂ ಉದ್ದೀನ್ ಅವರ ಪುತ್ರ.

‘ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರ ದೂರದೃಷ್ಟಿಯಲ್ಲಿ ಬಿಹಾರವನ್ನು ಬದಲಾಯಿಸಲು ಸಂಕಲ್ಪ ಮಾಡಿರುವ ಜನ ಸುರಾಜ್ಗೆ ನಾನು ಸೆಲ್ಯೂಟ್ ಮಾಡುತ್ತೇನೆ’ ಎಂದು ಗುರುವಾರ ಪಕ್ಷಕ್ಕೆ ಸೇರ್ಪಡೆಯಾದ ನಂತರ ಅವರು ಹೇಳಿದ್ದಾರೆ.

ಸೀಮಾಂಚಲಕ್ಕಾಗಿ ಹೋರಾಟ ಮಾಡುವ ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸಲು ಪಕ್ಷವೂ ತಮಗೆ ಅನುಮತಿ ನೀಡಿದೆ ಎಂದು ಆಲಂ ಅವರು ಹೇಳಿದ್ದಾರೆ. ‘ನನಗೆ ಬಹಳ ಸಮಯದಿಂದ ಉಸಿರುಗಟ್ಟಿದ ಅನುಭವವಾಗುತ್ತಿತ್ತು. ಅಲ್ಲಿ ಅದೇ ಹಳೆಯ ದಾಲ್ ಚಟ್ನಿ ಇತ್ತು’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.