ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮೇಲೆ ಕೋ‍ಪಿಸಿ ಕಾಂಗ್ರೆಸ್‌ಗೆ ಆಶೀರ್ವದಿಸಿದ ಬಜರಂಗಬಲಿ: ಬಿಹಾರ ಸರ್ಕಾರದ ಹರ್ಷ

Published 13 ಮೇ 2023, 12:40 IST
Last Updated 13 ಮೇ 2023, 12:40 IST
ಅಕ್ಷರ ಗಾತ್ರ

ಪಟ್ನಾ: ಕರ್ನಾಟಕ ಚುನಾವಣಾ ಮತ ಎಣಿಕೆ ಕಾರ್ಯ ಅಂತಿಮ ಹಂತ ತಲುಪಿದ್ದು, ಸ್ಪಷ್ಟ ಬಹುಮತ ಗಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಈ ಕುರಿತು ಬಿಹಾರ ಮುಖ್ಯಮಂತ್ರಿ ಜೆಡಿಯು ನಾಯಕ ನಿತೀಶ್ ಕುಮಾರ್ ನೇತೃತ್ವದ ಮೈತ್ರಿ ಸರ್ಕಾರ ಹರ್ಷ ವ್ಯಕ್ತಪಡಿಸಿದೆ.

‘ಪ್ರಧಾನಿ ಮೋದಿ ಅವರ ಮೇಲೆ ಕೋಪಿಸಿದ ಬಜರಂಗಬಲಿ ಕಾಂಗ್ರೆಸ್‌ಗೆ ಆಶೀರ್ವದಿಸಿದ್ದಾರೆ. ಮತದಾರರನ್ನು ಧರ್ಮದ ಆಧಾರದಲ್ಲಿ ಧ್ರುವೀಕರಿಸಿಸುವ ಬಿಜೆಪಿಯ ಹುನ್ನಾರ ಅದಕ್ಕೇ ಹಿನ್ನೆಡೆಯಾಗಿ ಪರಿಣಮಿಸಿದೆ‘ ಎಂದು ಕಾಂಗ್ರೆಸ್‌ ಎಂಎಲ್‌ಸಿ ಪ್ರೇಮ್‌ ಚಂದ್ರ ಮಿಶ್ರಾ ಅಭಿಪ್ರಾಯ ತಿಳಿಸಿದ್ದಾರೆ.

‘ಕರ್ನಾಟಕ ಚುನಾವಣೆಯ ಈ ಫಲಿತಾಂಶದಿಂದ ವಿಪಕ್ಷಗಳು ಬಿಜೆಪಿ ವಿರುದ್ಧ ಒಟ್ಟಾಗಿ ತಮ್ಮ ರಾಷ್ಟ್ರೀಯ ನಾಯಕನನ್ನು ಮುಂದಿನ ಲೋಕಸಭಾ ಚುನಾವಣೆಗೆ ಆರಿಸಲು ಸ್ಫೂರ್ತಿ ನೀಡಿದೆ’ ಎಂದು ಜೆಡಿಯು ಪಕ್ಷ ಹೇಳಿದೆ.‌

‘ಕರ್ನಾಟಕದಲ್ಲಿ ಬಿಜೆಪಿ ತನ್ನ ಪ್ರಚಾರದಲ್ಲಿ ವಿವಿಧ ತಂತ್ರಗಳನ್ನು ಪ್ರಯತ್ನಿಸಿತು. ಕೊನೆಯ ಅಸ್ತ್ರವಾಗಿ ಕೋಮುವಾದವನ್ನೂ ಮುಂದಿಟ್ಟಿತು. ಪ್ರಧಾನಿ ಕೂಡ ಉನ್ನತ ಹುದ್ದೆಗೆ ತಕ್ಕುದಲ್ಲದ ರೀತಿಯಲ್ಲಿ ಪ್ರಚಾರ ಮಾಡಿದ್ದರು. ಆದರೆ ಈ ಎಲ್ಲಾ ತಂತ್ರಗಳು ವಿಫಲವಾದವು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಭಾರದಿಂದ ಕರ್ನಾಟಕ ಇನ್ನು ಮುಕ್ತವಾಗಲಿದೆ‘ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

‘ಇತ್ತೀಚೆಗೆ ದೆಹಲಿ ನಗರ ಪಾಲಿಕೆಯಿಂದಲೂ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಲಾಗಿದೆ. ಮುಂಬರುವ ಮಧ್ಯಪ್ರದೇಶದ ಚುನಾವಣೆಯಲ್ಲೂ ಆ ಪಕ್ಷ ಹೊರಬೀಳಲಿದೆ. ಅಲ್ಲದೇ, 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ದೇಶವು ಬಿಜೆಪಿಯಿಂದ ಮುಕ್ತವಾಗಲಿದೆ, ನಿರೀಕ್ಷಿಸಿ‘ ಎಂದು ರಂಜನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT