‘ಮತದಾನದ ಹಕ್ಕು ಕಸಿಯುವ ಯತ್ನ’
ಜನರ ಹಕ್ಕುಗಳ ಪರವಾಗಿ ‘ಇಂಡಿಯಾ’ ಮೈತ್ರಿಕೂಟವು ಸಂಸತ್ತಿನಲ್ಲಿ ಸೋಮವಾರವೂ ಧ್ವನಿ ಎತ್ತಿತು. ದೇಶದಾದ್ಯಂತ ಎಸ್‌ಐಆರ್ ಅನುಷ್ಠಾನವು ದುರ್ಬಲ ವರ್ಗಗಳ ಜನರ ಮತದಾನದ ಹಕ್ಕನ್ನು ಕಸಿಯುವ ವ್ಯವಸ್ಥಿತ ಯತ್ನವಾಗಿದ್ದು ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಆರ್‌ಎಸ್‌ಎಸ್–ಬಿಜೆಪಿಯ ಮನುವಾದಿ ಮನಸ್ಥಿತಿಯು ಮೇಲುಗೈ ಸಾಧಿಸಲು ಅವಕಾಶ ನೀಡುವುದಿಲ್ಲ -ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ