ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಕಿಸ್‌ ಬಾನು ‍ಪ್ರಕರಣ: ಪಟಾಕಿ ಸಿಡಿಸಿ ಸಂಭ್ರಮಿಸಿದ ಕುಟುಂಬಸ್ಥರು

Published 8 ಜನವರಿ 2024, 10:42 IST
Last Updated 8 ಜನವರಿ 2024, 10:42 IST
ಅಕ್ಷರ ಗಾತ್ರ

ದಾಹೋದ್‌: ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶವನ್ನು ರದ್ದು ಪಡಿಸಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು, ಪ್ರಕರಣದ ಸಾಕ್ಷಿದಾರ ಸ್ವಾಗತ ಮಾಡಿದ್ದಾರೆ. ಬಿಲ್ಕಿಸ್‌ಗೆ ಇಂದು ನ್ಯಾಯ ಲಭಿಸಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿಗೆ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದು, ಇಲ್ಲಿನ ದೇವಗಢ ಬರಿಯಾ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

‘ಈ ಪ್ರಕರಣದಲ್ಲಿ ನಾನೂ ಒಬ್ಬ ಸಾಕ್ಷಿದಾರ. ಎಲ್ಲಾ ದೋಷಿಗಳಿಗೆ ಮಹಾರಾಷ್ಟ್ರ ನ್ಯಾಯಾಲಯ ಶಿಕ್ಷೆ ನೀಡಿತ್ತು. ಅವರನ್ನು ಬಿಡುಗಡೆ ಮಾಡುವ ಗುಜರಾತ್ ಸರ್ಕಾರದ ನಿರ್ಧಾರ ತಪ್ಪಾಗಿತ್ತು. ಹೀಗಾಗಿ ನಾವು ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದೆವು. ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ಸಂತೋಷವಾಗಿದೆ’ ಎಂದು ಪ್ರಕರಣ ಸಾಕ್ಷಿದಾರರಲ್ಲಿ ಓರ್ವರಾದ ಅಬ್ದುಲ್ ರಜಾಕ್ ಮನ್ಸೂರಿ ಹೇಳಿದ್ದಾರೆ.

ಬಿಲ್ಕಿಸ್‌ ಬಾನು ಅವರ ದೂರದ ಸಂಬಂಧಿಕರಲ್ಲಿ ಕೆಲವರು, ‌ದೇವಗಢ ಬರಿಯಾದಲ್ಲಿ ನೆಲೆಸಿದ್ದಾರೆ. ದೋಷಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್‌ನ ತೀರ್ಪು ಟಿ.ವಿಯಲ್ಲಿ ಬಿತ್ತರವಾಗುತ್ತಿದ್ದಂತೆಯೇ, ಅವರಲ್ಲಿ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಘಟನೆ ನಡೆದಾಗ ಬಿಲ್ಕೀಸ್ ಬಾನು ಅವರಿಗೆ 21 ವರ್ಷವಾಗಿತ್ತು. ಅಲ್ಲದೆ ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಗೋಧ್ರೋತ್ತರ  ಗಲಭೆಯ ಬಳಿಕ ನಡೆದ ಈ ಘಟನೆಯಲ್ಲಿ ಬಾನು ಅವರ ಮೂರು ವರ್ಷದ ಮಗು ಸೇರಿ 7 ಮಂದಿ ಕುಟುಂಬಸ್ಥರು ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT