ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಇಲ್ಲಿ ನಡೆಯುತ್ತಿರುವ ಎ.ಐ ಶೃಂಗದಲ್ಲಿ ಭಾಗವಹಿಸುವ ಕುರಿತು ಮಂಗಳವಾರ ಗೊಂದಲ ಉಂಟಾಗಿದೆ. ಅವರು ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ, ಅವರ ಗೇಟ್ಸ್ ಫೌಂಡೇಷನ್ನ ವಕ್ತಾರರು ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.

ಇದೇ 20ರ ವರೆಗೆ ನಡೆಯಲಿರುವ ಶೃಂಗದ ಅಧಿಕೃತ ವೆಬ್ಸೈಟ್ನಲ್ಲಿ ಗೇಟ್ಸ್ ಅವರೂ ಮುಖ್ಯ ಭಾಷಣಕಾರರಲ್ಲಿ ಒಬ್ಬರು ಎಂಬ ಮಾಹಿತಿ ನೀಡಲಾಗಿತ್ತು. ಆದರೆ ಶೃಂಗದಲ್ಲಿ ಮಾತನಾಡುವವರ ಪಟ್ಟಿಯಿಂದ ಮಂಗಳವಾರ ಅವರ ಹೆಸರನ್ನು ಕೈಬಿಡಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ಅವರು ಫೆಬ್ರುವರಿ 19ರಂದು ಬೆಳಿಗ್ಗೆ 11.50ಕ್ಕೆ ಶೃಂಗದಲ್ಲಿ ಮಾತನಾಡಬೇಕಿದೆ.

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ಗೆ ಸಂಬಂಧಿಸಿದ ಫೈಲ್ಗಳಲ್ಲಿ ಗೇಟ್ಸ್ ಅವರ ಹೆಸರು ಕಾಣಿಸಿಕೊಂಡಿರುವುದರಿಂದ ಶೃಂಗಸಭೆಗೆ ಹಾಜರಾಗುವುದಿಲ್ಲ ಎಂದು ಸರ್ಕಾರದ ಮೂಲಗಳು ಹೇಳಿವೆ.

ಆದರೆ ಈ ಸುದ್ದಿಯನ್ನು ಗೇಟ್ಸ್ ಫೌಂಡೇಷನ್ ಅಲ್ಲಗಳೆದಿದೆ. ‘ಬಿಲ್ ಗೇಟ್ಸ್ ಅವರು ಎ.ಐ ಶೃಂಗದಲ್ಲಿ ಭಾಗವಹಿಸುತ್ತಿದ್ದು, ನಿಗದಿಯಂತೆ ಭಾಷಣ ಮಾಡಲಿದ್ದಾರೆ’ ಎಂದು ಫೌಂಡೇಷನ್ನ ವಕ್ತಾರರು ತಿಳಿಸಿದ್ದಾರೆ.

ಭಾರತ ಪ್ರವಾಸದಲ್ಲಿರುವ ಗೇಟ್ಸ್ ಅವರು ಸೋಮವಾರ ವಿಜಯವಾಡಕ್ಕೆ ಭೇಟಿ ನೀಡಿದ್ದರು. ಅಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಕೆ.ಪವನ್ ಕಲ್ಯಾಣ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.