ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ(ಎಂಸಿಡಿ) ಮೇಯರ್ ಮತ್ತು ಉಪ ಮೇಯರ್ ಸ್ಥಾನದ ಚುನಾವಣೆಗೆ ಬಿಜೆಪಿಯ ಶಿಖಾ ರೈ ಮತ್ತು ಸೋನಿ ಪಾಂಡೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ಗೆಲ್ಲಲು ಅಗತ್ಯ ಸದಸ್ಯ ಬಲ ಇಲ್ಲದಿದ್ದರೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ರೈ ಅವರು ಗ್ರೇಟರ್ ಕೈಲಾಶ್–1 ವಾರ್ಡ್‌ನ ಸದಸ್ಯೆ ಮತ್ತು ಪಾಂಡೆ ಈಶಾನ್ಯ ದೆಹಲಿಯ ಸೋನಿಯಾ ವಿಹಾರ್ ವಾರ್ಡ್‌ನ ಸದಸ್ಯೆ.
‘ಎಎಪಿ ಪರ ಸ್ಪಷ್ಟ ಬಹುಮತ ಇರುವ ಕಾರಣ ಬಿಜೆಪಿ ಸ್ಪರ್ಧಿಸಲ್ಲ’ ಎಂದು ದೆಹಲಿ ಬಿಜೆಪಿ ನಾಯಕರೊಬ್ಬರು ಇತ್ತೀಚೆಗೆ ಹೇಳಿದ್ದರು.
ಎಂಸಿಡಿಯಲ್ಲಿ ಪ್ರತಿ ಆರ್ಥಿಕ ವರ್ಷದ ಅಂತ್ಯದಲ್ಲಿ ಹೊಸದಾಗಿ ಮೇಯರ್ ಆಯ್ಕೆ ನಡೆಯುತ್ತದೆ.