ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸೇವಾ ಕಾಯ್ದೆಯ ಅಗತ್ಯದ ಕುರಿತ ಪ್ರಚಾರ ವಾಹನಕ್ಕೆ ಚಾಲನೆ

Published 22 ಆಗಸ್ಟ್ 2023, 14:13 IST
Last Updated 22 ಆಗಸ್ಟ್ 2023, 14:13 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಸೇವಾ ಕಾಯ್ದೆಯ ಅಗತ್ಯದ ಕುರಿತು ಜನರಿಗೆ ಮನದಟ್ಟು ಮಾಡಲು ರಾಷ್ಟ್ರ ರಾಜಧಾನಿಯ ಏಳು ಲೋಕಸಭಾ ಕ್ಷೇತ್ರಗಳಿಗೆ ತೆರಳಲಿರುವ ಪ್ರಚಾರ ವಾಹನಗಳಿಗೆ ಮಂಗಳವಾರ ಇಲ್ಲಿ ಚಾಲನೆ ನೀಡಲಾಯಿತು.

‘ಏಳು ಪ್ರಚಾರ ವಾಹನಗಳು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಕಾಯ್ದೆಯನ್ನು ಯಾಕೆ ತರಲಾಗಿದೆ ಎಂಬುದರ ಕುರಿತು ವಿಡಿಯೊ ಪ್ರದರ್ಶಿಸಿ ಜನರಲ್ಲಿ ಅರಿವು ಮೂಡಿಸಲಿದೆ’ ಎಂದು ಬಿಜೆಪಿ ದೆಹಲಿ ಘಟಕ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ಹೇಳಿದ್ದಾರೆ.

‘ಪಟ್ಟಭದ್ರ ಹಿತಾಸಕ್ತಿ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಅರವಿಂದ ಕೇಜ್ರಿವಾಲ್‌ ಸರ್ಕಾರದ ಹಿಡಿತದಿಂದ ದೆಹಲಿಯನ್ನು ರಕ್ಷಿಸಲು ಈ ಕಾಯ್ದೆ ಅಗತ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಸಂಸತ್‌ನ ಒಳಗೆ ಮತ್ತು ಹೊರಗಡೆ ಈ ಮಸೂದೆಯ ಬೆಂಬಲಿಸಿ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ಮುಖಂಡರ ವಿಡಿಯೊಗಳನ್ನು ವಾಹನಗಳಿಗೆ ಅಳವಡಿಸಿರುವ ಪರದೆಯಲ್ಲಿ ಪ್ರದರ್ಶಿಸಲಾಗುವುದು ಎಂದಿದ್ದಾರೆ.

ದೆಹಲಿಯ ಬಿಜೆಪಿ ಸಂಸದರಾದ ಹರ್ಷವರ್ಧನ್‌, ರಮೇಶ್‌ ಬಿಧುರಿ ಮತ್ತು ಪರ್ವೇಶ್‌ ವರ್ಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆಯು ಈ ತಿಂಗಳ ಆರಂಭದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿತ್ತು. ಬಳಿಕ ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT