ಲಖನೌ: ಕೇಂದ್ರ ಮತ್ತು ರಾಜ್ಯದಲ್ಲಿರುವ ಆಡಳಿತಾರೂಢ ಬಿಜೆಪಿ ಸರ್ಕಾರ ತಮ್ಮ ಭರವಸೆಗಳನ್ನು ಈಡೇರಿಸಿಲ್ಲ. ಸಾರ್ವಜನಿಕರನ್ನು ದಾರಿ ತಪ್ಪಿಸಲು ಪಕ್ಷವು ಹಳೆಯ ಯೋಜನೆಗಳನ್ನು ಹೊಸ ಹೆಸರುಗಳೊಂದಿಗೆ ಮರುರೂಪಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಬಿಜೆಪಿ ಶೂನ್ಯವಾಗುವ ಮೊದಲು, ಅವರ ಸುತ್ತಲಿನ ಎಲ್ಲವೂ ಶೂನ್ಯವಾಗುತ್ತಿದೆ. ಅವರ ‘ಶೂನ್ಯ ಸಹಿಷ್ಣುತೆ’ ಶೂನ್ಯವಾದಂತೆಯೇ, ‘ಶೂನ್ಯ ಬಡತನ’ ಎಂಬ ಘೋಷಣೆಯೂ ಬಿಜೆಪಿಯ ಸುಳ್ಳಾಗಿದೆ. ಭಾರತವು ಗಣಿತದಲ್ಲಿ ಶೂನ್ಯದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿತು, ಜನರಲ್ಲಿ ಸುಳ್ಳನ್ನು ಹರಡಲು ಅಲ್ಲ’ ಎಂದು ಹೇಳಿದ್ದಾರೆ.

ಬಡತನವನ್ನು ಮಾತುಗಳಿಂದಲ್ಲ, ಕಾರ್ಯಗಳಿಂದ ನಿರ್ಮೂಲನೆ ಮಾಡಲಾಗುತ್ತದೆ. ಕಾರ್ಯದ ವಿಷಯಕ್ಕೆ ಬಂದಾಗ, ಬಿಜೆಪಿ ಸರ್ಕಾರ ಶೂನ್ಯದಲ್ಲಿದೆ. ಸರ್ಕಾರ ನಿರ್ಗಮಿಸುವ ಮೊದಲು ಎಲ್ಲವನ್ನೂ ಶೂನ್ಯ ಸ್ಥಿತಿಗೆ ತಲುಪಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಡವರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ, ಬಿಜೆಪಿ ತನ್ನ ಭರವಸೆಗಳನ್ನು ಈಡೇರಿಸಬೇಕೆಂದು ಅಖಿಲೇಶ್ ಆಗ್ರಹಿಸಿದ್ದಾರೆ.
.29 ವರ್ಷಗಳಿಂದ ಪ್ರಯಾಣಿಕರಿಗೆ ಉಚಿತ ಊಟ ನೀಡುತ್ತಿರುವ 'ಸಚ್ಖಂಡ್ ಎಕ್ಸ್ಪ್ರೆಸ್'.ಪೇರುಪೇಟೆ ಚೇತರಿಕೆ: 1,610 ಅಂಶ ಏರಿಕೆ ಕಂಡ ಸೆನ್ಸೆಕ್ಸ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.