ಮುಂಬೈ: ಜಾಗತಿಕ ಸುಂಕ ಯುದ್ಧದ ನಡುವೆಯು ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದ್ದು, ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ದೇಶಿಯ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ದಾಖಲಿಸಿವೆ.

ಬೆಳಿಗ್ಗೆ 9:56 ರ ವೇಳೆ ಬಿಎಸ್ಇಯ 30 ಷೇರುಗಳು ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 1,610 ಅಂಶಗಳಷ್ಟು ಏರಿಕೆ ಕಂಡು 76,767ರಲ್ಲಿ ಆರಂಭಿಸಿದೆ. ಎನ್ಎಸ್ಇ ನಿಫ್ಟಿ 493 ಅಂಶ ಏರಿಕೆ ಕಂಡು 23,321ರಲ್ಲಿ ವಹಿವಾಟು ಆರಂಭಿಸಿದೆ.

ಚೀನಾ ಹೊರತುಪಡಿಸಿ ಇತರ ದೇಶಗಳ ಮೇಲೆ ಪ್ರತಿಸುಂಕ ಜಾರಿ ಮಾಡುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 90 ದಿನಗಳ ಕಾಲ ಮುಂದೂಡಿದ್ದು, ಹೂಡಿಕೆದಾರರಲ್ಲಿ ಕೊಂಚ ಧೈರ್ಯ ಮೂಡಿಸಿದೆ. ಅಲ್ಲದೇ ಸ್ಮಾರ್ಟ್ಫೋನ್ಗಳು ಮತ್ತು ಕಂಪ್ಯೂಟರ್ಗಳ ಮೇಲಿನ ಸುಂಕಗಳ ಮೇಲೆ ವಿನಾಯಿತಿ ಘೋಷಿಸಿರುವುದು ವಾರದ ಹಿಂದೆ ಮಂಕಾಗಿದ್ದ ಪೇರುಪೇಟೆಯಲ್ಲಿ ಚೇತರಿಕೆ ಕಾಣಲು ಕಾರಣವಾಗಿದೆ.

ಅದಾಗ್ಯೂ ಸೆಮಿಕಂಡಕ್ಟರ್ಗಳು ಮತ್ತು ಔಷಧಗಳ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸುವ ಬಗ್ಗೆ ಅಮೆರಿಕ ಚಿಂತಿಸುತ್ತಿರುವುದರಿಂದ ಅನಿಶ್ಚಿತತೆ ಮುಂದುವರೆದಿದೆ.

ಅಂಬೇಡ್ಕರ್ ಜಯಂತಿ ಹಿನ್ನೆಲೆ ನಿನ್ನೆ(ಸೋಮವಾರ) ಪೇರುಪೇಟೆಗೆ ರಜೆಯಿತ್ತು. ಗುಡ್ಫ್ರೈಡೆ ಪ್ರಯುಕ್ತ ಶುಕ್ರವಾರವೂ ಷೇರುಪೇಟೆ ಸ್ಥಗಿತಗೊಳ್ಳಲಿದೆ. ಹೀಗಾಗಿ ಈ ವಾರ ಕೇವಲ ಮೂರು ದಿನಗಳು ಮಾತ್ರ ವಹಿವಾಟು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.