ನವದೆಹಲಿ: ಬಿಜೆಪಿ ಮತ್ತು ಜೆಡಿ(ಯು) ಪಕ್ಷಗಳು ಕಳೆದ 20 ವರ್ಷಗಳಿಂದ ಬಿಹಾರದ ಯುವಜನತೆಯ ಎಲ್ಲಾ ಅವಕಾಶಗಳು ಮತ್ತು ಕನಸುಗಳನ್ನು ಕಿತ್ತುಕೊಂಡಿವೆ. ರಾಜ್ಯದ ಸ್ವಾಭಿಮಾನವನ್ನು ಮರುಕಳಿಸುವಂತೆ ಮಾಡಲು ಇದೀಗ ಸರಿಯಾದ ಸಮಯ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಬಿಹಾರದ ಜನರು ಯಾವುದೇ ಸ್ಥಳಕ್ಕೆ ತೆರಳಿದರು ಕೂಡ, ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಅಲ್ಲಿನ ಭವಿಷ್ಯವನ್ನೇ ಬದಲಾಯಿಸುತ್ತಾರೆ. ಆದರೆ, ತಮ್ಮದೇ ಬಿಹಾರದ ಹಣೆಬರಹವನ್ನು ಬದಲಾಯಿಸಲು ಯಾಕೆ ಸಾಧ್ಯವಾಗಿಲ್ಲ ಗೊತ್ತೆ?, ಬಿಜೆಪಿ ಮತ್ತು ಜೆಡಿ(ಯು) ಪಕ್ಷಗಳು ಅವರ ಅವಕಾಶಗಳನ್ನು ಕಿತ್ತುಕೊಂಡು, ಅವರನ್ನು ಬಲವಂತವಾಗಿ ಕಾರ್ಮಿಕರನ್ನಾಗಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಕೈಗಾರಿಕಾ ವಲಯದಲ್ಲಿನ ಉದ್ಯೋಗದಲ್ಲಿ ಬಿಹಾರವು ದೇಶದಲ್ಲಿ 23ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕೇವಲ 1.3 ಲಕ್ಷ ಜನರು ಮಾತ್ರ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದು, ಅದರಲ್ಲಿ 36,135 ಜನರಷ್ಟೇ ಖಾಯಂ ನೌಕರರಾಗಿದ್ದಾರೆ. ಬಿಹಾರದ ಬದಲಾವಣೆಗೆ ಕಾಲ ಕೂಡಿಬಂದಿದ್ದು, ಮಹಾಘಟಬಂಧನದ ನ್ಯಾಯ ಸಂಕಲ್ಪವನ್ನು ಪುನರುಚ್ಚರಿಸುವ ಸಮಯ ಬಂದಿದೆ’ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಪ್ರಣಾಳಿಕೆಯನ್ನು ಖರ್ಗೆ ಹಂಚಿಕೊಂಡಿದ್ದಾರೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.