ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳತಿ ಜತೆ ಸಿಕ್ಕಿಬಿದ್ದ ಬಿಜೆಪಿ ನಾಯಕ: ಪಕ್ಷದಿಂದ ಉಚ್ಚಾಟನೆ

Last Updated 23 ಆಗಸ್ಟ್ 2022, 5:43 IST
ಅಕ್ಷರ ಗಾತ್ರ

ಕಾನ್ಪುರ: ಗೆಳತಿಯ ಜತೆ ಹೊರಗಡೆ ಸುತ್ತಾಡುವಾಗ ಸಿಕ್ಕಿಬಿದ್ದಿದ್ದ ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಬುಂದೇಲ್‌ಖಂಡ್ ಪ್ರಾಂತ್ಯದ ಬಿಜೆಪಿ ಪಕ್ಷದ ಕಾರ್ಯದರ್ಶಿ ಮೋಹಿತ್ ಸೋಂಕರ್ ಅವರು, ಗೆಳತಿಯ ಜತೆ ಹೊರಗಡೆ ಸುತ್ತಾಡಲು ಹೋಗಿದ್ದರು.

ಆ ಸಂದರ್ಭದಲ್ಲಿ ಅವರನ್ನು ಪತ್ತೆಹಚ್ಚಿದ್ದ ಪತ್ನಿ ಮತ್ತು ಅತ್ತೆ, ಸಾರ್ವಜನಿಕವಾಗಿ ಥಳಿಸಿದ್ದರು. ಪ್ರಕರಣ ಬೆಳಕಿಗೆ ಬರುತ್ತಲೇ, ಉತ್ತರ ಪ್ರದೇಶ ಬಿಜೆಪಿ ಘಟಕ ಮೋಹಿತ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.

ಮೋಹಿತ್ ಮತ್ತು ಅವರ ಗೆಳತಿ ವಿರುದ್ಧ ಮೋಹಿತ್ ಪತ್ನಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಷದಿಂದ ಉಚ್ಚಾಟನೆ ಮಾಡಿರುವ ಕುರಿತು ಮೋಹಿತ್ ಅವರಿಗೆ ಬಿಜೆಪಿ ಪತ್ರ ರವಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT