ಲಖನೌ: ಉತ್ತರ ಪ್ರದೇಶದ ಮೊರಾದಾಬಾದ್ ನಗರದ ಮೇಯರ್ ಮತ್ತು ಬಿಜೆಪಿ ಹಿರಿಯ ನಾಯಕ ವಿನೋದ್ ಅಗರ್ವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಪ್ರಚಾರಕ್ಕಾಗಿ ರಕ್ತದಾನ ಮಾಡಿದ್ದಾರೆ ಎಂದು ವರದಿಯಾಗಿದೆ.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿದ್ದ ಮೇಯರ್, ರಕ್ತದಾನಕ್ಕೆ ಹಾಸಿಗೆ ಮೇಲೆ ಮಲಗಿದ್ದು, ವೈದ್ಯರು ರಕ್ತ ತೆಗೆಯಲು ಸೂಜಿ ತಂದ ತಕ್ಷಣವೇ ಮೇಯರ್ ಹಾಸಿಗೆಯಿಂದ ಎದ್ದು ಕೋಣೆಯಿಂದ ಹೊರ ನಡೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೊ ಕುರಿತು ಪ್ರತಿಕ್ರಿಯಿಸಿದ ಮೇಯರ್, ‘ಇದು ನನ್ನ ಎದುರಾಳಿಗಳು ಮಾನಹಾನಿ ಉಂಟುಮಾಡಲು ನಡೆಸಿರುವ ಪಿತೂರಿ’ ಎಂದಿದ್ದಾರೆ.
‘ರಕ್ತದಾನ ಮಾಡುವ ಉದ್ದೇಶದಿಂದಲೇ ರಕ್ತದಾನ ಶಿಬಿರಕ್ಕೆ ಹೋಗಿದ್ದೆ. ಆದರೆ ವೈದ್ಯರು ಮಧುಮೇಹವಿರುವ ಕಾರಣ ರಕ್ತದಾನ ಮಾಡುವಂತಿಲ್ಲ ಎಂದರು’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ರಕ್ತದಾನ ಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದ್ದೇವೆ’ ಎಂದು ಹೇಳುವ ವಿಡಿಯೊವೊಂದನ್ನು ವಿನೋದ್ ಅಗರ್ವಾಲ್ ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದಾರೆ.
This is Moradabad Mayor From BJP Vinod Agarwal Staging a fake blood donation on the PM's birthday shows just how hollow both this politician and the PM's brand of leadership have become. Instead of addressing real issues, they focus on orchestrated gimmicks to fool the public. pic.twitter.com/nqUd6GHezO