ನವದೆಹಲಿ: ‘ಕಾಂಗ್ರೆಸ್ ಪಕ್ಷವು ತನ್ನ ಆಂತರಿಕ ಕಲಹವನ್ನು ತಣ್ಣಗಾಗಿಸಲು ‘ಶಾಂತಿ ಮಂಡಳಿ’ಯನ್ನು ಸ್ಥಾಪಿಸಬೇಕು. ಕರ್ನಾಟಕ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿನ ಕಲಹದ ಬಳಿಕ, ಈಗ ಜಾರ್ಖಂಡ್ನಲ್ಲಿ ಕಲಹ ಆರಂಭಾಗಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಅವರು ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಜಾರ್ಖಂಡ್ನ ಶಾಸಕರು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ತರೂರ್ ವರ್ಸಸ್ ಕಾಂಗ್ರೆಸ್ ನಡೆಯಿತು. ಈಗ ಜಾರ್ಖಂಡ್ನಲ್ಲಿ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ನಡೆಯುತ್ತಿದೆ’ ಎಂದರು.

‘ಗೆಹಲೋತ್ ಮತ್ತು ಪೈಲಟ್, ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ, ರಾಹುಲ್ ಮತ್ತು ಪ್ರಿಯಾಂಕಾ, ತರೂರ್ ಮತ್ತು ಕೇರಳ ಕಾಂಗ್ರೆಸ್, ಸುಖು ಮತ್ತು ಪ್ರತಿಭಾ ಅವರ ಮಧ್ಯದ ಜಗಳ ತಣಿಸಲು ಕಾಂಗ್ರೆಸ್, ತಕ್ಷಣವೇ ಶಾಂತಿ ಮಂಡಳಿ ಸ್ಥಾಪಿಸಬೇಕು’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.