ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಿಧಾನ ಬದಲಾಯಿಸಲು BJPಗೆ 400 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ: ಉದ್ಧವ್ ಠಾಕ್ರೆ

Published : 14 ಮಾರ್ಚ್ 2024, 12:02 IST
Last Updated : 14 ಮಾರ್ಚ್ 2024, 12:02 IST
ಫಾಲೋ ಮಾಡಿ
Comments

ಗುಹಾಗಢ: ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕಾಗಿಯೇ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಪ್ರಚಾರ ಮಾಡುತ್ತಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಗುರುವಾರ ಹೇಳಿದರು.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಗುಹಾಗಢದಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಒಂದು ರಾಷ್ಟ್ರ ಒಂದು ಚುನಾವಣೆ’ಯು ಸರ್ವಾಧಿಕಾರದತ್ತ ಸಾಗುವ ಪರಿಕಲ್ಪನೆಯಾಗಿದೆ ಎಂದರು.

‘ಇತ್ತೀಚೆಗೆ 100 ಕ್ಕೂ ಹೆಚ್ಚು ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಲಾಯಿತು. ಆ ವೇಳೆ ಹಲವಾರು ಪ್ರಮುಖ ಮಸೂದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು’ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರ ಕಾಲಕ್ಕಿಂತ ಇಂದಿನ ಬಿಜೆಪಿ ಭಿನ್ನವಾಗಿದೆ ಎಂದು ಠಾಕ್ರೆ ನುಡಿದರು.

2022 ರಲ್ಲಿ ಶಿವಸೇನೆಯಲ್ಲಿನ ಬಂಡಾಯವು ಅದರ ವಿಭಜನೆಗೆ ಕಾರಣವಾದುದನ್ನು ಉಲ್ಲೇಖಿಸಿದ ಅವರು, ಮುಖ್ಯಮಂತ್ರಿಯಾಗಲು ಎಂದಿಗೂ ನಾನು ಉತ್ಸುಕನಾಗಿರಲಿಲ್ಲ. ಆದರೆ ವಿಶೇಷ ಸನ್ನಿವೇಶದಲ್ಲಿ ಹುದ್ದೆಯನ್ನು ಸ್ವೀಕರಿಸಬೇಕಾಗಿ ಬಂತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT