ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಬಿಜೆಪಿ 370 ಸ್ಥಾನಗಳ ಗಡಿ ದಾಟಲಿದೆ–ಮೋದಿ

ಲೂಟಿ–ಒಡೆದು ಆಳುವುದೇ ಕಾಂಗ್ರೆಸ್‌ ಧ್ಯೇಯ: ಟೀಕೆ
Published 11 ಫೆಬ್ರುವರಿ 2024, 14:12 IST
Last Updated 11 ಫೆಬ್ರುವರಿ 2024, 14:12 IST
ಅಕ್ಷರ ಗಾತ್ರ

ಝಾಬುವಾ(ಮಧ್ಯಪ್ರದೇಶ): ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯು 370 ಸ್ಥಾನಗಳ ಗಡಿ ದಾಟಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ನಡೆದ ಬುಡಕಟ್ಟು ಸಮುದಾಯದವರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400 ಸ್ಥಾನಗಳ ಗಡಿ ದಾಟಲಿದೆ ಎಂಬುದಾಗಿ ವಿರೋಧ ಪಕ್ಷಗಳ ಸದಸ್ಯರೇ ಸಂಸತ್‌ನಲ್ಲಿ ಹೇಳಿದ್ದಾರೆ’ ಎಂದರು.

‘ಪಕ್ಷವು 370 ಸ್ಥಾನಗಳಲ್ಲಿ ಗೆಲ್ಲಬೇಕಾದರೆ ಮತ ಚಲಾವಣೆ ಪ್ರಮಾಣ ಹೆಚ್ಚಬೇಕು. ಇದಕ್ಕಾಗಿ ಪ್ರತಿ ಬೂತ್‌ನಲ್ಲಿ ಕಳೆದ ಚುನಾವಣೆಗಿಂತ ಹೆಚ್ಚುವರಿಯಾಗಿ 370 ಮತಗಳು ಬಿಜೆಪಿಗೆ ಬರುವಂತೆ ಖಾತ್ರಿಪಡಿಸಬೇಕು’ ಎಂದು ಮತದಾರರಿಗೆ ಅವರು ಮನವಿ ಮಾಡಿದರು.

‘ಮುಂಬರುವ ಚುನಾವಣೆಗಾಗಿ ಮತ ಕೇಳಲು ನಾನು ಇಲ್ಲಿಗೆ ಬಂದಿಲ್ಲ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಭಾರಿ ಬಹುಮತದಿಂದ ಗೆಲ್ಲಿಸಿರುವುದಕ್ಕಾಗಿ ನಿಮಗೆ ಧನ್ಯವಾದ ಹೇಳಲು ಒಬ್ಬ ಸೇವಕನಾಗಿ ನಿಮ್ಮ ಮುಂದೆ ಬಂದಿದ್ದೇನೆ’ ಎಂದು ಮೋದಿ ಹೇಳಿದರು.

ರಾಜ್ಯದಲ್ಲಿ ಕೈಗೊಂಡಿರುವ ₹7,550 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಸ್ತಾಪಿಸಿದ ಅವರು, ‘ಮಧ್ಯಪ್ರದೇಶದಲ್ಲಿ ನಮ್ಮ ಡಬಲ್‌ ಎಂಜಿನ್‌ ಸರ್ಕಾರ ಡಬಲ್‌ ವೇಗದಿಂದ ಕೆಲಸ ಮಾಡುತ್ತಿದೆ’ ಎಂದರು.

ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೆಸ್‌ಗೆ ಗ್ರಾಮೀಣ ಪ್ರದೇಶಗಳು, ಬಡವರು ನೆನಪಾಗುತ್ತಾರೆ. ಲೂಟಿ ಮಾಡುವುದು ಹಾಗೂ ಒಡೆದು ಆಳುವುದೇ ಆ ಪಕ್ಷದ ಧ್ಯೇಯವಾಗಿದೆ’ ಎಂದು ಟೀಕಿಸಿದರು.

ಮಧ್ಯಪ್ರದೇಶದ ಝಾಬುವಾದಲ್ಲಿ ಭಾನುವಾರ ನಡೆದ ಬುಡಕಟ್ಟು ಸಮುದಾಯಗಳ ಸಮ್ಮೇಳನದ ಅಂಗವಾಗಿ ನಡೆಸಿದ ರೋಡ್‌ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರತ್ತ ಕೈಬೀಸಿದರು. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್ ಪಾಲ್ಗೊಂಡಿದ್ದರು –ಪಿಟಿಐ ಚಿತ್ರ 

ಮಧ್ಯಪ್ರದೇಶದ ಝಾಬುವಾದಲ್ಲಿ ಭಾನುವಾರ ನಡೆದ ಬುಡಕಟ್ಟು ಸಮುದಾಯಗಳ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ 
ಮಧ್ಯಪ್ರದೇಶದ ಝಾಬುವಾದಲ್ಲಿ ಭಾನುವಾರ ನಡೆದ ಬುಡಕಟ್ಟು ಸಮುದಾಯಗಳ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT