ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಕಡಾ 96ರಷ್ಟು ಸ್ಥಾನಗಳನ್ನು ಅವಿರೋಧವಾಗಿ ಗೆದ್ದ ಬಿಜೆಪಿ

ತ್ರಿಪುರಾದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ
Last Updated 18 ಸೆಪ್ಟೆಂಬರ್ 2018, 17:02 IST
ಅಕ್ಷರ ಗಾತ್ರ

ಅಗರ್ತಲಾ: ರಾಜ್ಯದಲ್ಲಿ ನಡೆಯಬೇಕಿದ್ದಮೂರು ಹಂತದ ಪಂಚಾಯಿತಿ ಚುನಾವಣೆಯಲ್ಲಿ ಶೇಕಡಾ 96ರಷ್ಟು ಸ್ಥಾನಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಕೆ.ರಾವ್‌ ಅವರು ಮಂಗಳವಾರ ತಿಳಿಸಿದ್ದಾರೆ.

ಕಳೆದ ಮಾರ್ಚ್‌ ತಿಂಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಇಂಡಿಜಿನೀಯಸ್‌ ಪೀಪಲ್ಸ್‌ ಫ್ರಂಟ್‌ (ಐಪಿಎಫ್‌ಟಿ) ಅಧಿಕಾರಕ್ಕೆ ಬಂದಿತ್ತು. ಇದಾದ ಬಳಿಕ ರಾಜ್ಯದ ಗ್ರಾಮಪಂಚಾಯಿತಿ, ಪಂಚಾಯತ್‌ ಸಮಿತಿ ಹಾಗೂ ಜಿಲ್ಲಾ ಪರಿಷತ್‌ ಸ್ಥಾನಗಳಿಗೆ ಬಹುತೇಕ ಸದಸ್ಯರು ರಾಜೀನಾಮೆ ಸಲ್ಲಿಸಿದ್ದರು. ಇದರಿಂದ 3 ಸಾವಿರ ಸ್ಥಾನಗಳು ಖಾಲಿ ಉಳಿದಿದ್ದವು.ತೆರವಾದ ಸ್ಥಾನಗಳಿಗೆ ಇದೇ 30ರಂದು ಉಪ ಚುನಾವಣೆ ನಡೆಯಲಿದೆ.

ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಬಿಜೆ‍ಪಿ ಮುಖಂಡರು ತಡೆಯೊಡ್ಡಿದ್ದರು ಎಂದುವಿರೋಧ ಪಕ್ಷ ಮತ್ತು ಐಪಿಎಫ್‌ಟಿ ಪಕ್ಷದ ಮುಖಂಡರು ಆರೋಪಿಸಿದ್ದು, ಈ ಕಾರಣದಿಂದ ಚುನಾವಣೆಯನ್ನೇ ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.

‘ಗ್ರಾಮಪಂಚಾಯಿತಿ ವ್ಯಾಪ್ತಿಯ 3,386 ಸೀಟುಗಳ ಪೈಕಿ 3,207, 161 ಗ್ರಾಮ ಪಂಚಾಯಿತಿ ಸಮಿತಿ ಹಾಗೂ 18 ಜಿಲ್ಲಾ ಪರಿಷತ್‌ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಚುನಾವಣೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ದೂರು ಕೂಡ ದಾಖಲಾಗಿಲ್ಲ’ ಎಂದು ರಾವ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT