ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕೆಗಳ ಸಹಿಸದ ಬಿಜೆಪಿ ನಾಯಕರು: ಚಿದಂಬರಂ ಕಿಡಿ

Published 10 ಜೂನ್ 2023, 6:05 IST
Last Updated 10 ಜೂನ್ 2023, 6:05 IST
ಅಕ್ಷರ ಗಾತ್ರ

ನವದೆಹಲಿ: ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವುದಕ್ಕೆ ಬಿಜೆಪಿಯ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದು, ‘ಬಿಜೆಪಿಯವರು ಟೀಕೆಗಳನ್ನು ಸಹಿಸುವುದಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ‘ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಒಡಿಶಾ ರೈಲು ದುರಂತ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಿರುವುದನ್ನು ಖಂಡಿಸಿ ಖರ್ಗೆ ಪ್ರಧಾನಿಗೆ ಪತ್ರ ಬರೆದಿದ್ದರು. ‘ಸಿಬಿಐ ಕೆಲಸ ಅಪರಾಧಗಳನ್ನು ಪತ್ತೆ ಹಚ್ಚುವುದೇ ವಿನಃ ರೈಲು ಅಫಘಾತಗಳನ್ನು ತನಿಖೆ ಮಾಡುವುದಲ್ಲ‘ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಖರ್ಗೆ ಪತ್ರಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಸಂಸದ ತೇಜಸ್ವಿ ಸೂರ್ಯ, ಪಿ. ಸಿ. ಮೋಹನ್‌ ಮತ್ತು ಎಸ್.ಮುನಿಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು.'ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯದಿಂದ ಪಡೆದ ಮಾಹಿತಿಗಳ ಆಧಾರದ ಮೇಲೆ ಪ್ರಧಾನಿಗೆ ಪತ್ರ ಬರೆಯುವುದು ನಿಮ್ಮಂತಹ ನಾಯಕನಿಗೆ ಸರಿ ಹೊಂದುವುದಿಲ್ಲ. ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ನಿಮಗೆ ಸುಳ್ಳು ಸುದ್ದಿಗಳನ್ನು ಸತ್ಯವೆಂದು ಹೇಳುವಂತೆ ಒತ್ತಾಯ ಮಾಡಿರಬಹುದು‘ ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು.

ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಪಿ. ಚಿದಂಬರ್‌, ‘ಟೀಕೆಗಳನ್ನು ಬಿಜೆಪಿ ನಾಯಕರುಗಳು ಸಹಿಸುವುದಿಲ್ಲ ಎಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಿಗೆ ಪತ್ರ ಬರೆಯುವ ಎಲ್ಲಾ ಹಕ್ಕುಗಳಿವೆ. ಪ್ರಜಾಪ್ರಭುತ್ವ ದೇಶದಲ್ಲಿ ಪ್ರಧಾನಿಯವರು ತಮ್ಮ ಪ್ರಶ್ನೆಗೆ ಉತ್ತರಿಸುತ್ತಾರೆ ಎಂದು ಜನರು ನಿರೀಕ್ಷಿಸುತ್ತಾರೆ. ಆದರೆ, ಈಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿದೆ ಎಂದರೆ ಪ್ರಧಾನಿಗಳು ಜನರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ‘ ಎಂದು ಹೇಳಿದರು.

‘ಪ್ರಧಾನಿಯವರು ಉತ್ತರ ನೀಡಬೇಕಾದ ಜಾಗದಲ್ಲಿ ಅವರ ಕೆಳಗಿನ ನಾಲ್ವರು ನಾಯಕರು ಉತ್ತರಿಸುತ್ತಾರೆ. ಅವರ ಉತ್ತರಗಳಂತೂ ಅರ್ಥವಿಲ್ಲದ, ಟೊಳ್ಳಾಗಿರುವ ವಾದಗಳಾಗಿವೆ‘ ಎಂದು ಕುಟುಕಿದರು.

‘ಬಾಲೇಶ್ವರದಲ್ಲಿ ರೈಲು ಅಪಘಾತ ಸಂಭವಿಸುವ ಸಾಧ್ಯತೆಯಿದೆ ಎಂದು ನೈರುತ್ಯ ರೈಲ್ವೇ ಪ್ರಧಾನ ಮುಖ್ಯ ಕಾರ್ಯಾಚರಣಾ ವ್ಯವಸ್ಥಾಪಕ ಕಳೆದ ಫೆಬ್ರವರಿ 9ರಂದು ಪತ್ರ ಬರೆದು ಮುನ್ಸೂಚನೆ ನೀಡಿದ್ದರು. ಅದಾಗ್ಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ಪತ್ರವು ನೈರುತ್ಯ ರೈಲ್ವೇ ಇಲಾಖೆಯ ಯಾವುದೋ ಒಂದು ಕಡತದಲ್ಲಿ ಧೂಳು ಹಿಡಿದು ಹಾಗೆ ಉಳಿದಿದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಪತ್ರಕ್ಕೆ ಸಂಬಂಧಪಟ್ಟಂತೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಬಿಜೆಪಿ ಸಂಸದರು ತಿಳಿಸುತ್ತಾರಾ?‘ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT