ನವದೆಹಲಿ: ಕೋಳಿಗಳಿಗೆ ಒಂದೇ ಡೋಸ್ ನೀಡುವ ಲಸಿಕೆ ಈಗ ಭಾರತದಲ್ಲಿ ಲಭ್ಯ ಎಂದು ಬಯೋಫಾರ್ಮಾಸ್ಯೂಟಿಕಲ್ ಕಂಪನಿ ‘ಬೊಯಿಹ್ರಿಂಗರ್ ಇಂಗೆಲ್ಹಿಮ್ ಇಂಡಿಯಾ’ ಬುಧವಾರ ತಿಳಿಸಿದೆ.

ಈ ಲಸಿಕೆ ಇಡೀ ಜೀವಿತಾವಧಿಯುದ್ದಕ್ಕೂ ರಕ್ಷಣೆ ಒದಗಿಸುತ್ತದೆ. ’ವಿಎಎಕ್ಸ್ಎಕ್ಸ್ಐಟಿಇಕೆ ಎಚ್ವಿಟಿ+ಐಬಿಡಿ’ ಹೆಸರಿನಲ್ಲಿ ಈ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಸೋಂಕು ಹರಡುವ ಬುರ್ಸಲ್ ಕಾಯಿಲೆ ಮತ್ತು ಮರೆಕ್ ಕಾಯಿಲೆಗಳ ವಿರುದ್ಧ ಈ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾಯಿಲೆಗಳಿಂದಲೇ ಕುಕ್ಕುಟೋದ್ಯಮಕ್ಕೆ ಅಪಾರ ಹಾನಿಯಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಲಸಿಕೆ ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಬ್ರೆಜಿಲ್ನಲ್ಲಿ ಈ ಲಸಿಕೆಯನ್ನು ಮೊದಲ ಬಾರಿ ಬಿಡುಗಡೆ ಮಾಡಲಾಗಿತ್ತು. ಈಗ ಲಸಿಕೆಯು 100 ದೇಶಗಳಲ್ಲಿ ಲಭ್ಯವಾಗುತ್ತಿದೆ. ಜಾಗತಿಕವಾಗಿ 13 ಸಾವಿರ ಕೋಟಿ ಪಕ್ಷಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಲಸಿಕೆಯು ಸರಳ ಮತ್ತು ಪರಿಣಾಮಕಾರಿಯಾಗಿದೆ. ಒಂದು ಲಸಿಕೆಯಿಂದ ಎರಡು ಕಾಯಿಲೆಗಳಿಗೆ ಔಷಧ ದೊರೆತಂತಾಗಿದೆ. ಜತೆಗೆ ಹೆಚ್ಚುವರಿಯಾಗಿ ಯಾವುದೇ ಲಸಿಕೆ ಹಾಕುವ ಅಗತ್ಯ ಇರುವುದಿಲ್ಲ ಎಂದು ‘ಬೊಯಿಹ್ರಿಂಗರ್ ಇಂಗೆಲ್ಹಿಮ್ ಇಂಡಿಯಾ’ ತಿಳಿಸಿದೆ.

ಇದನ್ನೂ ಓದಿ... ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.