ಕೋಲ್ಕತ್ತ: ಬಿಜೆಪಿಯ ಮಾಜಿ ಸಂಸದ ಅರ್ಜುನ್ ಸಿಂಗ್ ಅವರ ಬಾಟಾಪಾರಾದ ನಿವಾಸದ ಹೊರಗಡೆ ದುಷ್ಕರ್ಮಿಗಳು ಬಾಂಬ್ ಎಸೆದು, ಗುಂಡಿನ ದಾಳಿ ನಡೆಸಿದ್ದಾರೆ.

‘ಬುಧವಾರ ರಾತ್ರಿ ವೇಳೆ ಈ ದಾಳಿ ನಡೆದಿದ್ದು, ಯುವಕನೊಬ್ಬ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಸಿಂಗ್ ಹಾಗೂ ಆಪ್ತರು ತಕ್ಷಣವೇ ಬೆನ್ನುಹತ್ತಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

‘ಐದರಿಂದ ಏಳು ಸುತ್ತು ಗುಂಡಿನ ದಾಳಿ ನಡೆಸಲಾಗಿದೆ. ತೃಣಮೂಲ ಕಾಂಗ್ರೆಸ್ನ ಕೌನ್ಸಿನರ್ ಸುನಿತಾ ಸಿಂಗ್ ಅವರ ಮಗನೇ ಈ ದಾಳಿಯ ಹಿಂದಿದ್ದಾರೆ’ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದಾರೆ.

‘ಮೆಘನಾ ಸೆಣಬಿನ ಕಾರ್ಖಾನೆ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದು ಹಿಂಸಾಚಾರಕ್ಕೆ ತಿರುಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಿಂಗ್ ಹಾಗೂ ಅವರ ಬೆಂಬಲಿಗರೇ ಹಿಂಸಾಚಾರಕ್ಕೆ ಪ್ರೇರಣೆ ನೀಡಿದರು’ ಎಂದು ಟಿಎಂಸಿ ಜಗದ್ದಾಲ್ ಕ್ಷೇತ್ರದ ಶಾಸಕ ಸೋಮನಾಥ್ ಶ್ಯಾಮ್ ಆರೋಪಿಸಿದರು.

ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಗಾಯಗೊಂಡ ಯುವಕನನ್ನು ಕೋಲ್ಕತ್ತದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.