ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೋಪಥಿ ವಿರುದ್ಧ ರಾಮ್‌ದೇವ್ ಹೇಳಿಕೆ: ಬಿಹಾರದಲ್ಲಿ ದೇಶದ್ರೋಹ ಪ್ರಕರಣ ಕೋರಿ ಅರ್ಜಿ

Last Updated 2 ಜೂನ್ 2021, 10:47 IST
ಅಕ್ಷರ ಗಾತ್ರ

ಮುಜಫ್ಫರಪುರ, ಬಿಹಾರ: ಅಲೋಪಥಿ ವೈದ್ಯಪದ್ಧತಿ ಹಾಗೂ ವೈದ್ಯರ ಕುರಿತು ಅವಮಾನಕರ ಹೇಳಿಕೆಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕೋರಿ ಇಲ್ಲಿನ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಜ್ಞಾನಪ್ರಕಾಶ್ ಎಂಬುವವರು ತಮ್ಮ ವಕೀಲ ಸುಧೀರ್‌ಕುಮಾರ್ ಓಝಾ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ. ಹಂಗಾಮಿ ನ್ಯಾಯಾಧೀಶ ಶೈಲೇಂದ್ರ ರಾಯ್‌ ಅವರಿಗೆ ಈ ಅರ್ಜಿ ಸಲ್ಲಿಸಲಾಗಿದೆ.

‘ಯೋಗ ಗುರು ಬಾಬಾ ರಾಮ್‌ದೇವ್‌ ಅವರು ತಮ್ಮ ಹೇಳಿಕೆಗಳ ಮೂಲಕ ದ್ರೋಹ ಎಸಗಿದ್ದಾರೆ. ಹೀಗಾಗಿ ವಂಚನೆ, ದೇಶದ್ರೋಹಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳಡಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ. ಜೂನ್‌ 7ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ಕೋರ್ಟ್‌ ಹೇಳಿದೆ.

ವಿವಿಧ ವಿಷಯಗಳಿಗೆ ಸಂಬಂಧಿಸಿ ಕೋರ್ಟ್‌ಗೆ ಪದೇಪದೇ ಅರ್ಜಿ ಸಲ್ಲಿಸುವ ಕಾರಣ ಜ್ಞಾನಪ್ರಕಾಶ್‌ ಸದಾ ಸುದ್ದಿಯಲ್ಲಿ ಇರುತ್ತಾರೆ. ಅನೇಕ ಹಿರಿಯ ರಾಜಕಾರಣಿಗಳು, ಬಾಲಿವುಡ್‌ ನಟ–ನಟಿಯರು ಹಾಗೂ ಹಲವು ವಿದೇಶಿಯರ ವಿರುದ್ಧವೂ ಇವರು ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT