ನವದೆಹಲಿ: ಲಿಂಗತ್ವ ಅಲ್ಪಸಂಖ್ಯಾತರ (ಎಲ್‌ಜಿಬಿಟಿಕ್ಯೂಎ+) ಕುರಿತ ಮಾಹಿತಿ ಪ್ರಸಾರ ಹಾಗೂ ಪ್ರಕಟಿಸುವುದಕ್ಕೆ ಸಂಬಂಧಿಸಿ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಲಿಂಗತ್ವ ಅಲ್ಪಸಂಖ್ಯಾತರ ಕುರಿತು ರೂಢಿಯಲ್ಲಿರುವ ಅಭಿಪ್ರಾಯಗಳನ್ನು ಮತ್ತು ಪಕ್ಷಪಾತ ಉತ್ತೇಜಿಸುವ ಸುದ್ದಿಗಳನ್ನು ಪ್ರಸಾರ ಮಾಡಬಾರದು. ವ್ಯಕ್ತಿಯ ಲಿಂಗತ್ವ ಅಥವಾ ಲೈಂಗಿಕತೆ ಕುರಿತು ಅನುಮತಿ ಇಲ್ಲದೆ ಸುದ್ದಿಯ ಪ್ರಸಾರ ಇಲ್ಲವೇ ಪ್ರಕಟಿಸಬಾರದು ಎಂದು ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಎಲ್ಲರನ್ನು ಒಳಗೊಳ್ಳುವ ಲಿಂಗ ತಟಸ್ಥ ಭಾಷೆಯನ್ನು ಬಳಸಬೇಕು ಹಾಗೂ ವ್ಯಕ್ತಿಯು ಆದ್ಯತೆಯಂತೆ ಅವರ ಹೆಸರು ಇಲ್ಲವೇ ಸರ್ವನಾಮ ಬಳಸಬೇಕು. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಕುರಿತ ಸೂಕ್ಷ್ಮವಲ್ಲದ ಹಾಗೂ ತಪ್ಪು ವರದಿಗಳನ್ನು ಮಾಡುವುದರಿಂದ ಸಾಮಾಜಿಕವಾಗಿ ಆಗುವ ಪರಿಣಾಮಗಳು ಗಂಭೀರವಾಗಿರಲಿವೆ ಎಂದು ಪ್ರಾಧಿಕಾರ ಹೇಳಿದೆ.

ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು

ವರದಿಗಾರಿಕೆಯು ಯಾವುದೇ ವಿಷಯವನ್ನು ನಾಟಕೀಯವಾಗಿಸಬಾರದು. ವೀಕ್ಷಕರಲ್ಲಿ ಆಘಾತ, ಸಂಕಟ ಅಥವಾ ಭಯ ಹುಟ್ಟಿಸುವಂತಿರಬಾರದು

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಕುರಿತು ರೂಢಿಗತ ಅಭಿಪ‍್ರಾಯಗಳು ಮುಂದುವರಿಯುವಂತೆ ಮಾಡುವ ಸುದ್ದಿಗಳ ಪ್ರಸಾರ ಮಾಡಬಾರದು

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ವಿರುದ್ಧದ ದ್ವೇಷ ಭಾಷಣ ಎಂಬರ್ಥ ಬರುವ ಭಾಷೆ ಅಥವಾ ನಿಂದನೀಯ ಪದಗಳನ್ನು ಬಳಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.