ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಗಂಟೆ ತನಿಖೆ ಬಳಿಕ ಇ.ಡಿ ಕಚೇರಿಯಿಂದ ಹೊರಬಂದ ಬಿಆರ್‌ಎಸ್ ಶಾಸಕಿ ಕವಿತಾ

Last Updated 11 ಮಾರ್ಚ್ 2023, 17:35 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ಪಕ್ಷದ ಶಾಸಕಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯವು(ಇ.ಡಿ) 8 ಗಂಟೆ ತನಿಖೆಗೆ ಒಳಪಡಿಸಿದೆ.

ಅಬಕಾರಿ ಹಗರಣದ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಯನ್ನು ಮುಂದಿಟ್ಟುಕೊಂಡು ಕವಿತಾ ವಿಚಾರಣೆ ನಡೆಸಲಾಗಿದೆ.

ಕವಿತಾ ತನಿಖೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರಿಂದ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿತ್ತು. ಬೆಳಿಗ್ಗೆ 11.15ರ ಸುಮಾರಿಗೆ ಅವರು ತನಿಖೆಗೆ ಹಾಜರಾಗಿದ್ದರು.

ಪ್ರಕರಣದಲ್ಲಿ ಎಎಪಿ ಸರ್ಕಾರಕ್ಕೆ ₹100 ಕೋಟಿ ಲಂಚ ನೀಡಿದೆ ಎನ್ನಲಾದ ಸೌತ್ ಗ್ರೂಪ್‌ನ ಬಂಧಿತ ಆರೋಪಿ ಹಾಗೂ ಇ.ಡಿ ವಶದಲ್ಲಿರುವ ಅರುಣ್ ರಾಮಚಂದ್ರನ್ ಪಿಳ್ಳೆ ಅವರ ಎದುರೇ ಕವಿತಾ ವಿಚಾರಣೆ ನಡೆಸಲಾಗಿದೆ.

ರಾತ್ರಿ 8 ಗಂಟೆ ಸುಮಾರಿಗೆ ಕವಿತಾ ಇ.ಡಿ ಕಚೇರಿಯಿಂದ ಹೊರಬಂದಿದ್ದಾರೆ.

ಇ.ಡಿ ಪ್ರಕಾರ, 'ಸೌತ್ ಗ್ರೂಪ್' ಎಂಬುದು ಕವಿತಾ, ಅರಬಿಂದೋ ಫಾರ್ಮಾ ಪ್ರವರ್ತಕ ಶರತ್ ರೆಡ್ಡಿ, ವೈಎಸ್ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಮತ್ತು ಇತರರೊಂದಿಗೆ ಸಂಪರ್ಕ ಹೊಂದಿದ ಮದ್ಯದ ಕಾರ್ಟೆಲ್ ಆಗಿದೆ. ಪಿಳ್ಳೈ ಅವರು ಕವಿತಾ ಅವರ ಬೇನಾಮಿ ಹೂಡಿಕೆಗಳನ್ನು ಪ್ರತಿನಿಧಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT