ನವದೆಹಲಿ: ಭಾರತ್ ಸ್ಟೇಜ್–4 (ಬಿಎಸ್ ನಾಲ್ಕು) ಮಾನದಂಡಗಳಿಗೆ ಅನುಗುಣವಾಗಿ ಇರದ ಹಳೆಯ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.

ಬಿಎಸ್–3 ಮಾನದಂಡಗಳನ್ನು ಪೂರೈಸದ 10–15 ವರ್ಷದ ಹಳೆಯ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕೆಂದು ಕೋರಿ ದೆಹಲಿ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು.

ಅರ್ಜಿ ಪುರಸ್ಕರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಸುಪ್ರೀಂ ಕೋರ್ಟ್ನ ಆಗಸ್ಟ್ 12ರ ಆದೇಶವನ್ನು ಪರಿಷ್ಕರಿಸಿದೆ.

‘ವಾಹನಗಳ ವಯಸ್ಸಿನ ಆಧಾರದಲ್ಲಿ ಮಾತ್ರ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಆಗಸ್ಟ್ 12ರ ಆದೇಶದಲ್ಲಿ ತಡೆ ನೀಡಲಾಗಿತ್ತು. ಆದರೆ, ಆ ವಾಹನಗಳು ಬಿಎಸ್–4 ಮಾನದಂಡಗಳಿಗೆ ಅನುಗುಣವಾಗಿದ್ದರೆ ಮಾತ್ರ ಮಾಲಿಕರಿಗೆ ಈ ರಕ್ಷಣೆ ಸಿಗಲಿದೆ. ಬಿಎಸ್–4 ಹಾಗೂ ಬಿಎಸ್ –3 ಮಾನದಂಡಗಳಿಗೆ ಅನುಗುಣವಾಗಿ ಇರದಿದ್ದರೆ ಕ್ರಮ ಕೈಗೊಳ್ಳಬಹುದು’ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.