ನವದೆಹಲಿ: ಗಡಿ ಭದ್ರತಾ ಪಡೆಯ(ಬಿಎಸ್ಎಫ್) ಕಾನ್ಸ್ಟೆಬಲ್ಗಳ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರ ಕೋಟಾವನ್ನು ಶೇಕಡ 10ರಿಂದ ಶೇ 50ಕ್ಕೆ ಹೆಚ್ಚಳ ಮಾಡಿ ಕೇಂದ್ರ ಗೃಹ ಇಲಾಖೆ ರಾಜ್ಯಪತ್ರ(ಗೆಜೆಟ್) ಹೊರಡಿಸಿದೆ.

ಗಡಿ ಭದ್ರತಾ ಪಡೆ, ಸಾಮಾನ್ಯ ಸೇವಾ ಶ್ರೇಣಿ (ಪತ್ರಾಂಕಿತವಲ್ಲದ) ನೇಮಕಾತಿ ನಿಯಮಗಳು–2015ಕ್ಕೆ ತಿದ್ದುಪಡಿ ತಂದು ಕೋಟಾ ಹೆಚ್ಚಿಸಲಾಗಿದೆ.

ಮಾಜಿ ಅಗ್ನಿವೀರರ ಮೊದಲ ತಂಡ ಐದು ವರ್ಷದವರೆಗೂ ವಯೋಮಿತಿ ವಿನಾಯಿತಿ ಪಡೆದರೆ ಆನಂತರ ಬರುವವರು ಮೂರು ವರ್ಷಗಳ ವಿನಾಯಿತಿ ಪಡೆಯಲಿದ್ದಾರೆ. ಅಲ್ಲದೇ ಇವರನ್ನು ದೈಹಿಕ ಸಾಮಾನ್ಯ ಪರೀಕ್ಷೆ ಮತ್ತು ದೈಹಿಕ ಸದೃಢತೆ ಪರೀಕ್ಷೆಯಿಂದ ಹೊರಗಿಡಲಾಗಿದೆ ಎಂದು ಶುಕ್ರವಾರ ಹೊರಬಿದ್ದಿರುವ ಆದೇಶದಲ್ಲಿ ತಿಳಿಸಲಾಗಿದೆ.

ಪ್ರತಿ ನೇರ ನೇಮಕಾತಿಯಲ್ಲೂ ಮಾಜಿ ಅಗ್ನಿವೀರರಿಗೆ ಸ್ಥಾನ ಕಾಯ್ದಿರಿಸಲಾಗುತ್ತದೆ. ಮಾಜಿ ಸೈನಿಕರಿಗೆ ಶೇ 10, ಕಾರ್ಯಾಚರಣೆ ಕಾನ್ಸ್ಟೆಬಲ್ಗಳಿಗೆ ಶೇ 3ರಷ್ಟು ಕೋಟಾ ಇರಲಿದೆ. ಮಾಜಿ ಅಗ್ನಿವೀರರಲ್ಲದ ಶೇ 47ರಷ್ಟು ಸ್ಥಾನಗಳನ್ನು ಸಿಬ್ಬಂದಿ ನೇಮಕಾತಿ ಆಯೋಗದ ಮೂಲಕ ನಡೆಸಲಾಗುವುದು. ಸೇನಾ ಪಡೆಗಳಲ್ಲಿ ನಾಲ್ಕು ವರ್ಷ ಪೂರೈಸಿದ ಅಗ್ನಿವೀರರಿಗೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳಲ್ಲಿ ಅವಕಾಶ ನೀಡಲು ಕೇಂದ್ರ ಸರ್ಕಾರ ಹಲವು ತಿದ್ದುಪಡಿ ತಂದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

2022ರಲ್ಲಿ ಕೇಂದ್ರ ಸರ್ಕಾರ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಜಾರಿಗೆ ತಂದಿತ್ತು. ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನವರನ್ನು ಭೂಸೇನೆ, ವಾಯುಪಡೆ, ನೌಕಾಪಡೆಗೆ ನಾಲ್ಕು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುತ್ತಿದೆ. ಇವರಲ್ಲಿ ಶೇ 25ರಷ್ಟು ಮಂದಿಗೆ ಸೇನೆಯಲ್ಲೇ 15ಕ್ಕೂ ಹೆಚ್ಚಿನ ವರ್ಷ ಸೇವೆ ಸಲ್ಲಿಸುವ ಅವಕಾಶವನ್ನೂ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.