ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತ್ರಿಪುರಾ | ಬಿಎಸ್‌ಎಫ್ ಕಾರ್ಯಾಚರಣೆ; ₹36 ಲಕ್ಷ ಮೌಲ್ಯದ ಚಿನ್ನ ವಶ, ಓರ್ವ ಬಂಧನ

Published 19 ಮೇ 2024, 6:18 IST
Last Updated 19 ಮೇ 2024, 6:18 IST
ಅಕ್ಷರ ಗಾತ್ರ

ಅಗರ್ತಲಾ: ಪಶ್ಚಿಮ ತ್ರಿಪುರಾದ ನಿಶ್ಚಿಂತಪುರದಲ್ಲಿ ಚಿನ್ನ ಕಳ್ಳಸಾಗಣೆ ಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಿಫಲಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ₹36 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.

ವಿವಿಧ ಮೂಲಗಳಿಂದ ಲಭಿಸಿದ ನಿಖರ ಮಾಹಿತಿ ಮೇರೆಗೆ ಬಿಎಸ್‌ಎಫ್ ಕಾರ್ಯಾಚರಣೆ ನಡೆಸಿತ್ತು. ನಿಶ್ಚಿಂತಪುರ ಗಡಿಯ ಔಟ್‌ಪೋಸ್ಟ್‌ನ ವಿವಿಧ ಸ್ಥಳಗಳಲ್ಲಿ ಬಲೆ ಬೀಸಿದ್ದರು. ಅಲ್ಲದೆ ಇಬ್ಬರು ಶಂಕಿತರ ಮೇಲೆ ನಿಗಾ ಇರಿಸಿದ್ದರು.

ಶಂಕಿತರು ಬಾಂಗ್ಲಾದೇಶದ ಕಡೆಯಿಂದ ಭಾರತದತ್ತ ಸಾಗಿದ್ದರು. ಬಳಿಕ ಗಡಿ ದಾಟಿ ಹತ್ತಿರದ ಅರಣ್ಯ ಪ್ರದೇಶವನ್ನು ಪ್ರವೇಸಿಸಿದ್ದರು. ಈ ವೇಳೆ ಕಾರ್ಯಪ್ರವೃತ್ತರಾದ ಬಿಎಸ್‌ಎಫ್ ಯೋಧರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನೊಬ್ಬ ಶಂಕಿತ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತನನ್ನು ಪ್ರಶಾಂತ್ ರೈ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT