ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಜನ್ಮದಿನದಂದು 'ಬೆಹನ್ ಜಿ' ಆ್ಯಪ್‌ ಬಿಡುಗಡೆ

Published 6 ಜನವರಿ 2024, 14:23 IST
Last Updated 6 ಜನವರಿ 2024, 14:23 IST
ಅಕ್ಷರ ಗಾತ್ರ

ಲಕ್ನೋ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಜನ್ಮದಿನದಂದು (ಜನವರಿ 15) 'ಬೆಹನ್ ಜಿ' (Behan Ji) ಆ್ಯಪ್‌ ಅನ್ನು ಬಿಡುಗಡೆ ಮಾಡಲು ಪಕ್ಷ ಯೋಜಿಸಿದೆ ಎಂದು ಬಿಎಸ್‌ಪಿಯ ಯುಪಿ ಘಟಕದ ಮುಖ್ಯಸ್ಥ ವಿಶ್ವನಾಥ್ ಪಾಲ್ ಶನಿವಾರ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ‘ನಮೋ’ ಆ್ಯಪ್ ಮಾದರಿಯಲ್ಲಿಯೇ ತಯಾರಿಸಲಾದ ಈ ಆ್ಯಪ್‌ನೊಂದಿಗೆ ಯುವ ಕಾರ್ಯಕರ್ತರನ್ನು ಸಂಪರ್ಕಿಸಲು ಪಕ್ಷ ಉದ್ದೇಶಿಸಿದೆ ಎಂದು ಅವರು ಹೇಳಿದರು.

‘ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಬಿಎಸ್‌ಪಿ ಜನವರಿ 15 ರಂದು ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಿದೆ. ಈ ಸಭೆಗಳಲ್ಲಿ ಪಕ್ಷದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಕುರಿತು ರಾಜ್ಯದ ಜನರಿಗೆ ಮಾಹಿತಿ ನೀಡಲಾಗುವುದು' ಎಂದು ವಿಶ್ವನಾಥ್ ತಿಳಿಸಿದರು.

ಇನ್ನೆರಡ್ಮೂರು ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷವು ಸಂಪೂರ್ಣ ಸಜ್ಜಾಗಿದೆ. ಕಾರ್ಯಕರ್ತರಿಗೆ ಶಕ್ತಿ ತುಂಬಲು ಈ ಜನಸಂಪರ್ಕ ಸಭೆಗಳನ್ನು ಆಯೋಜಿಸುತ್ತಿದೆ ಎಂದರು.

ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವು ಇಂಡಿಯಾ ಬಣದೊಂದಿಗೆ ಕೈಜೋಡಿಸಲಿದೆಯೇ? ಎಂಬ ಪ್ರಶ್ನೆಗೆ, ನಾವು ಕೇವಲ ಕಾರ್ಯಕರ್ತರು. ಎಲ್ಲಾ ನಿರ್ಧಾರಗಳನ್ನು ಪಕ್ಷದ ಮುಖ್ಯಸ್ಥರು ತೆಗೆದುಕೊಳ್ಳುತ್ತಾರೆ ಎಂದರು.

2024ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕಳೆದ ವರ್ಷ ಜುಲೈನಲ್ಲಿ ಘೋಷಿಸಿದ್ದರು. ಎನ್‌ಡಿಎ ಮತ್ತು ಇಂಡಿಯಾ ಬಣವನ್ನು ಟೀಕಿಸಿದ್ದ ಅವರು, ಅವರ್ಯಾರೂ ದಲಿತರು ಮತ್ತು ತುಳಿತಕ್ಕೊಳಗಾದ ವರ್ಗಗಳಿಗೆ ದನಿಯಾಗಿಲ್ಲ ಎಂದು ಆರೋಪಿಸಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದವು. ಬಿಎಸ್‌ಪಿ 10 ಸ್ಥಾನಗಳನ್ನು ಗೆದ್ದರೆ, ಅಖಿಲೇಶ್ ಯಾದವ್ ಅವರ ಎಸ್‌ಪಿ ಐದು ಸ್ಥಾನಗಳನ್ನು ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT