ನವದೆಹಲಿ: ದೇಶದಾದ್ಯಂತ ಮೂರು ಲಕ್ಷ ಶಾಲೆಗಳ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಸೋಮವಾರ ನಡೆದ ವಿಕಸಿತ ಭಾರತ ಬಿಲ್ಡಥಾನ್–2025ರಲ್ಲಿ ಪಾಲ್ಗೊಂಡರು.

ಆರನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳನ್ನೊಳಗೊಂಡ ದೇಶದ ಬೃಹತ್ ಸುಸಂಘಟಿತ ಇನೋವೇಶನ್ ಹ್ಯಾಕಥಾನ್ನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು.

‘ಬಿಲ್ಡಥಾನ್ ಸ್ಪರ್ಧೆಯಷ್ಟೇ ಅಲ್ಲ. ಇದೊಂದು ಘನೋದ್ದೇಶ. ನಾವೀನ್ಯತೆಯನ್ನು ಉತ್ತೇಜಿಸುವ ಚಳವಳಿ. ಇಲ್ಲಿ ಮೊಳೆತ ಆಲೋಚನೆಗಳು ಹೊಸ ಮಾದರಿ ರಚಿಸಲು ಮತ್ತು ದೇಶೀಯ ಹಾಗೂ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ದಾರಿ ಮಾಡಿಕೊಡಲಿವೆ ಎಂಬ ವಿಶ್ವಾಸ ನನಗಿದೆ’ ಎಂದು ಕೇಂದ್ರ ಶಿಕ್ಷಣ ಸಚಿವರು ಹೇಳಿದರು.

ದೇಶದಲ್ಲಿ ಇದುವರೆಗೂ ನಡೆದ ಶಾಲಾ ಹ್ಯಾಕಥಾನ್ಗಳಲ್ಲಿ ಇದೇ ಅತಿದೊಡ್ಡ ಕಾರ್ಯಕ್ರಮವಾಗಿ ದಾಖಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.